BBK- 12: ರಾತ್ರೋರಾತ್ರಿ ಸೂರಜ್ ಬೆಡ್ ಗೆ ಬಂದ ರಾಶಿಕ – ಎಲ್ಲರೂ ಮಲಗಿದ್ದಾಗ ಆಗಿದ್ದೇನು?

Share the Article

BBK-12 : ಬಿಗ್ ಬಾಸ್ ಕನ್ನಡ ಸೀಸನ್ 12 ಉತ್ತಮ ಪ್ರತಿಕ್ರಿಯೆಯೊಂದಿಗೆ ಭರ್ಜರಿ ಪ್ರದರ್ಶನವನ್ನು. ಸಾಕಷ್ಟು ಎಕ್ಸ್ಟ್ರಾರ್ಡಿನರಿ ಪ್ರತಿಭೆಗಳು ಈ ಬಾರಿ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಈ ನಡುವೆ ಎಲ್ಲರ ಗಮನ ಸೆಳೆಯುತ್ತಿರುವುದು ಕಪಲ್ ಜೋಡಿ ಎಂದೇ ಫೇಮಸ್ ಆಗುತ್ತಿರುವ ಸೂರಜ್ ಮತ್ತು ರಾಶಿಕ.

ರಾಶಿಕಾ ಅವರು ಬಿಗ್ ಬಾಸ್ ಆರಂಭದಿಂದಲೂ ಕೂಡ ಮನೆಯೊಳಗೆ ಇದ್ದಾರೆ ಮೂರು ವಾರಗಳ ಬಳಿಕ ಸೂರಜ್ ವೈಲ್ಡ್ ಕಾರ್ಡ್ ಮುಖಾಂತರ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಇದೀಗ ಇವರಿಬ್ಬರ ನಡುವೆ ಪ್ರೇಮಕಹಾನಿ ಶುರುವಾಗಿದೆ ಎಂದೆಲ್ಲ ವಿಶ್ಲೇಷಿಸಲಾಗುತ್ತಿದೆ. ಇದಕ್ಕೆ ಕಾರಣ ಇವರಿಬ್ಬರು ನಡೆದುಕೊಳ್ಳುತ್ತಿರುವ ರೀತಿ. ಈ ನಡುವೆ ಅಚ್ಚರಿ ಎಂಬಂತೆ ಮಧ್ಯರಾತ್ರಿ ಕೂಲ್‌ ಆಗಿ ಮಲಗಿದ್ದ ಸೂರಜ್‌ ಪಕ್ಕ ಹೋದ ರಾಶಿಕಾ ಗುಸು ಗುಸು ಮಾತನಾಡಿಕೊಂಡಿದ್ದಾರೆ. ಪ್ರೇಕ್ಷಕರು ತಮ್ಮ ಲವ್‌ ಬಗ್ಗೆ ಮಾತಾಡ್ತಾರೆ ಅಂತ ಅಂದುಕೊಂಡಿದ್ರೆ.. ಇವರು ಮಾತನಾಡಿದ್ದೇ ಬೇರೆ ವಿಚಾರ..

ಮಲಗಿದ್ದ ಸೂರಜ್‌ ಹತ್ರ ಬಂದ ರಾಶಿಕಾ, ಸ್ವಿಮ್ಮಿಂಗ್‌ ಫೂಲ್‌ ನೀರಲ್ಲಿ ಏನೋ ಕಾಣುತ್ತಿದೆ ನೋಡು ಅಂತ ಹೇಳ್ತಾಳೆ.. ಆಗ ಸೂರಜ್‌ ಅದು ಬಿಗ್‌ ಬಾಸ್‌ ಅಕ್ಷರದ ಪ್ರತಿಬಿಂಬ ಅಂತ ಹೇಳ್ತಾನೆ.. ಆಗ ರಾಶಿಕಾ.. ಅದಲ್ಲ ಸರಿಯಾಗಿ ನೋಡು.. ಅಂತ ಮತ್ತೇ ಪ್ರಶ್ನೆ ಮಾಡ್ತಾಳೆ.. ಆಗ ಏನ್‌ ಅಂತ ಗೊತ್ತಾಗಿಲ್ಲ ಅಂತಾನೆ ಸೂರಜ್‌.. ಕೊನೆಗೆ ನೀನೇ ಹೇಳು ಅಂತ ರಾಶಿಕಾನ ಹೇಳಿದಾಗ ಅವಳೂ ಸಹ.. ಏನೂ ಇಲ್ಲ ಬಿಡು ಅಂತ ಹೇಳಿ ಸುಮ್ಮನಾಗುತ್ತಾಳೆ.

Comments are closed.