ವಾಯು ಗುಣಮಟ್ಟ: ಮೈಸೂರು ನಗರ ರಾಜ್ಯಕ್ಕೇ ಪ್ರಥಮ, ದೇಶಕ್ಕೆ ತೃತೀಯ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಟಾನ್ ಗರಿಮೆಗೆ ಮತ್ತೊಂದು ಗರಿ ಏರಿಸಿಕೊಂಡಿದೆ. ವಾಯು ಗುಣಮಟ್ಟ ಸೂಚ್ಯಂಕ ಅಂದರೆ ಶುದ್ಧಗಾಳಿ ಹೊಂದಿರುವ ರಾಜ್ಯದ ನಗರಗಳಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಸಾಂಸ್ಕೃತಿಕ ನಗರ ಪರಿಸರ ಸ್ನೇಹಿ ನಗರ ಕೂಡಾ ಆಗಿದೆ. ಅಷ್ಟೇ ಅಲ್ಲದೆ, ವಾಯು ಗುಣಮಟ್ಟ ಸೂಚ್ಯಂಕ ಅಂದರೆ ಶುದ್ಧಗಾಳಿ ಹೊಂದಿರುವ ರಾಜ್ಯದ ನಗರಗಳಲ್ಲಿ ದೇಶದಲ್ಲಿ 3ನೇ ಸ್ಥಾನವನ್ನು ಪಡೆದಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ತನ್ನ ವರದಿ ಬಿಡುಗಡೆ ಮಾಡಿದ್ದು, ಮತ್ತೊಮ್ಮೆ ಮೈಸೂರು ಶುದ್ಧ ಗಾಳಿ ಹೊಂದಿರುವ ನಗರ ಎಂಬುದನ್ನು ಸಾಬೀತುಪಡಿಸಿದೆ. ವಿಶಾಲವಾದ ನಗರದ ರಸ್ತೆಯ ಇಕ್ಕೆಲದಲ್ಲಿ ಹಬ್ಬಿರುವ ಬೃಹತ್ ಮರಗಳು, ಸಾಲು ಸಾಲು ಉದ್ಯಾನಗಳು, ನೀರಾಶಯದ ಪ್ರದೇಶಗಳು, ಹಸುರಿನಿಂದ ಕಂಗೊಳಿಸುವ ಬಡಾವಣೆಗಳಿಂದ ನಗರ ಶುದ್ಧಗಾಳಿಗೆ ಸಹಕಾರಿಯಾಗಿದೆ. ಅಲ್ಲದೆ ಮೈಸೂರಿಗೆ ಅಂಟಿಕೊಂಡಂತೆ ಇರುವ ಚಾಮುಂಡಿ ಬೆಟ್ಟದ ಹಸಿರು ಮತ್ತು ಸುತ್ತಮುತ್ತ ಹರಡಿರುವ ಕಾಡುಗಳು ಕೂಡಾ ಮೈಸೂರಿನ ಮಾಲಿನ್ಯ ನಿಯಂತ್ರಣಕ್ಕೆ ದಾರಿ ಮಾಡಿ ಕೊಟ್ಟಿದ್ದು, ಇದೀಗ ದೇಶದ ಗಮನ ಸೆಳೆಯುವಂತೆ ಮಾಡಿದೆ.
Comments are closed.