Gilli Nata: ಗಿಲ್ಲಿ ನಟ ಯೂಟ್ಯೂಬ್ ನಿಂದ ಗಳಿಸುತ್ತಿದ್ದ ಹಣವೆಷ್ಟು?

Share the Article

Gilli Nata: ಗಿಲ್ಲಿ ನಟ ಅವರು ಬಿಗ್ ಬಾಸ್​ನಲ್ಲಿ (Bigg Boss) ತಮ್ಮದೇ ಹೊಸ ಛಾಪು ಮೂಡಿಸುತ್ತಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದು ಈಗ ಬಿಗ್ ಬಾಸ್​​ನಲ್ಲಿ ಅವರ ಆಟ ಅನೇಕರಿಗೆ ಇಷ್ಟ ಆಗುತ್ತಿದೆ. ಗಿಲ್ಲಿ ನಟ ಆರಂಭದಲ್ಲಿ ಯುಟ್ಯೂಬ್ ಚಾನೆಲ್ ಮಾಡಿಕೊಂಡು ಸಣ್ಣಪುಟ್ಟ ವಿಡಿಯೋಗಳನ್ನು ಅಪ್ಲೋಡ್ ಮಾಡಿ ಖ್ಯಾತಿಗಳಿಸಿದರು. ನಂತರ ಕಾಮಿಡಿ ಕಿಲಾಡಿಗಳು ಸೇರಿದಂತೆ ವಿವಿಧ ಶೋಗಳಲ್ಲಿ ಭಾಗವಹಿಸಿ ತನ್ನ ಕಾಮಿಡಿಯಿಂದ ಹೆಸರು ಮಾಡಿದರು. ಹಾಗಿದ್ರೆ ಗಿಲ್ಲಿ ನಟ ಅವರ ಯೂಟ್ಯೂಬ್ ಮುಖಾಂತರ ಗಳಿಸುತ್ತಿದ್ದ ಹಣವೆಷ್ಟು ಗೊತ್ತಾ?

ಎಸ್​ಎಸ್​ಎಲ್​ಸಿ ಬಳಿಕ 2 ವರ್ಷಗಳ ಐಟಿಐ ಕೋರ್ಸ್​ ಮುಗಿಸಿ ಯುಟ್ಯೂಬ್​ ಶುರು ಮಾಡಿದ ಗಿಲ್ಲಿ ನಟ ಅಲ್ಲಿಂದಲೇ ಜನಪ್ರಿಯವಾದವರು. ಊರಿನ ಜನರನ್ನೆಲ್ಲಾ ಒಟ್ಟುಗೂಡಿಸಿ ಕಾಮಿಡಿ ಸ್ಕಿಟ್‌ ಮಾಡಿ ಸೋಷಿಯಲ್​ ಮೀಡಿಯಾದಲ್ಲಿ ಅಪ್​ಲೋಡ್​ ಮಾಡುತ್ತಿದ್ದ ಇವರ ʻನಲ್ಲಿಮೂಳೆʼ ಸಕತ್​ ಫೇಮಸ್​​ ಆಗಿ, ಮಿಲಿಯನ್‌ಗಟ್ಟಲೇ ವ್ಯೂವ್ಸ್​ ಬಂದು, ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದ್ದರು. ಇದೀಗ ಇವರ ಯುಟ್ಯೂಬ್​ ಆದಾಯದ ಕುರಿತು ಯುಟ್ಯೂಬರ್​ ಪ್ರಶಾಂತ್​ ಅವರು ಇನ್​ಸ್ಟಾಗ್ರಾಮ್​ನಲ್ಲಿ ಮಾಹಿತಿ ನೀಡಿದ್ದಾರೆ.

ಗಿಲ್ಲಿ ಚಾನೆಲ್​ನಲ್ಲಿ 2.34 ಲಕ್ಷ ಜನ ಚಂದಾದಾರರು ಇದ್ದಾರೆ. 14 ವಿಡಿಯೋ ಅಪ್​ಲೋಡ್​ ಮಾಡಿದ್ದಾರೆ. ಏಕೆಂದರೆ ಇವರ ಸೋಷಿಯಲ್​ ಮೀಡಿಯಾದಲ್ಲಿ ಹಲವು ವಿಡಿಯೋಗಳು ಇದ್ದರೂ, ಅವುಗಳನ್ನೆಲ್ಲಾ ಗಿಲ್ಲಿ ನಟ ನಿರ್ದೇಶಿಸಿರುವುದು ಮಾತ್ರ ಆಗಿರುವ ಕಾರಣ, ಈ ಲೆಕ್ಕಾಚಾರ ಗಿಲ್ಲಿನಟ ಶೇರ್​ ಮಾಡಿರುವ ವಿಡಿಯೋಗಳ ಸಂಪಾದನೆ ಲೆಕ್ಕಾಚಾರವಾಗಿದೆ. ಇವರ ವಿಡಿಯೋ ಡ್ಯುರೇಷನ್​ 8 ರಿಂದ 12 ನಿಮಿಷಗಳು ಇವೆ. ಮನೋರಂಜನಾ ಕ್ಯಾಟಗರಿಗೆ ಸೇರಿವೆ. ಇದನ್ನೆಲ್ಲಾ ಪರಿಗಣನೆಗೆ ತೆಗೆದುಕೊಂಡರೆ ಇವರ ಒಂದು ಲಕ್ಷ ವ್ಯೂವ್ಸ್​ಗೆ 50 ಸಾವಿರ ರೂಪಾಯಿ ಸಿಗುತ್ತದೆ.

ಒಟ್ಟಾರೆ ಗಿಲ್ಲಿ ನಟನ ಇದುವರೆಗಿನ ವಿಡಿಯೋಗಳ ವೀಕ್ಷಣೆ 37.33 ಮಿಲಿಯನ್​ ಆಗಿರುವ ಕಾರಣ, 18 ಲಕ್ಷದ 66 ಸಾವಿರ ರೂಪಾಯಿಗಳನ್ನು ಅಂದಾಜು ಗಳಿಸಿದ್ದಾರೆ ಎನ್ನಲಾಗಿದೆ.

Comments are closed.