Bigg boss: ಕಿಚ್ಚ ಸುದೀಪ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

Share the Article

Bigg boss: ನಟ ಕಿಚ್ಚ ಸುದೀಪ್ (Kichcha Sudeep) ವಿರುದ್ಧವೇ ಮಹಿಳಾ ಆಯೋಗದಲ್ಲಿ (Women’s Commission) ಪ್ರಕರಣ ದಾಖಲಾಗಿದೆ. ಜೊತೆಗೆ ಅಶ್ವಿನಿ ಗೌಡ ವಿರುದ್ಧ ದೂರು ದಾಖಲಾಗಿದೆ.

ಹೌದು, ಬಿಗ್ ಬಾಸ್ ನಿರೂಪಕ ನಟ ಕಿಚ್ಚ ಸುದೀಪ್ ವಿರುದ್ಧವೇ ಈಗ ಮಹಿಳಾ ಆಯೋಗದಲ್ಲಿ ದೂರು ದಾಖಲಾಗಿದೆ. ಬಿಗ್ ಬಾಸ್ ಬುಡಕ್ಕೆ ಈಗ ಕೇಸಿನ ಬಿಸಿ ತಟ್ಟಿದೆ. ರಕ್ಷಿತಾ ಶೆಟ್ಟಿ ವಿರುದ್ಧ ಸುದೀಪ್ ಗರಂ ಆಗಿದ್ದು, ನನ್ನ ಪಿತ್ತ ನೆತ್ತಿಗೇರುತ್ತಲ್ಲ ಅದಕ್ಕಿಂತ ಮೊದಲು ಅಂತಾ ಬೈದಿದ್ರು. ಇದು ಮಹಿಳೆಗೆ ಆದ ಅವಮಾನ, ದರ್ಪ ಅಂತಾ ಸಂಧ್ಯಾ ಪವಿತ್ರ ಅನ್ನೋರು ಆಯೋಗದಲ್ಲಿ ದೂರು ದಾಖಲು ಮಾಡಿದ್ದಾರೆ. ಜೊತೆಗೆ ಬಿಡದಿ ಠಾಣೆಗೂ ದೂರು ಕೊಟ್ಟಿದ್ದಾರೆ.

ಇನ್ನು ಸಂಧ್ಯಾ ದೂರು ಕೊಡುತ್ತಿದ್ದಂತೆ ಸುದೀಪ್ ಅಭಿಮಾನಿಗಳು ಧಮ್ಕಿ ಹಾಕುತ್ತಿದ್ದಾರೆ ಎಂದು ಸಂಧ್ಯಾ ಅಳಲು ತೋಡಿಕೊಂಡಿದ್ದಾರೆ.ಇನ್ನು ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧವೂ ಆಯೋಗದ ಮೆಟ್ಟಿಲೇರಿರುವ ಸಂಧ್ಯಾ ರಕ್ಷಿತಾರನ್ನು ಎಸ್ ಕ್ಯಾಟಗರಿ, ಎಲ್ಲಿಂದ ಬಂದಿದ್ಯಾ ಗೊತ್ತು ಅಂತಾ ನಿಂದಿಸಿದ್ದಕ್ಕೆ ಆಯೋಗಕ್ಕೆ ದೂರು ಕೊಟ್ಟಿದ್ದಾರೆ. ಗಿಲ್ಲಿ ನಟನ ಮೇಲೆ ಹಲ್ಲೆ ಮಾಡಿದ ರಿಷಿಕಾ ವಿರುದ್ಧವೂ ದೂರು ನೀಡಿದ್ದಾರೆ.ಒಟ್ಟಾರೆ ಬಿಗ್ ಬಾಸ್ ಮನೆಗೆ ಅದೇನು ಗ್ರಹಚಾರವೋ ಗೊತ್ತಿಲ್ಲ. ದಿನದಿಂದ ದಿನಕ್ಕೆ ವಿವಾದಗಳಿಂದಲೇ ಬಿಗ್ ಬಾಸ್ ಹೌಸ್ ಸದ್ದು ಮಾಡುತ್ತಿದೆ.

Comments are closed.