Bihar : ಚುನಾವಣೆಗೆ ನಿಲ್ಲದ, MLC ಅಲ್ಲದ ದೀಪಕ್ ಗೆ ನಿತೀಶ್ ಸಂಪುಟದಲ್ಲಿ ಸ್ಥಾನ – ಯಾರು ಈ ಪ್ರಭಾವಿ ವ್ಯಕ್ತಿ?

Bihar: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ NDA ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿ ಇದೀಗ ಸರ್ಕಾರವನ್ನು ರಚನೆ ಮಾಡಿದೆ. ನಿತೀಶ್ ಕುಮಾರ್ ಅವರ ಹತ್ತನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನವನ್ನು ಕೂಡ ಸ್ವೀಕರಿಸಿದ್ದಾರೆ. ಮಿತ್ರ ಪಕ್ಷಗಳಿಗೆ ತೃಪ್ತಿಕರವಾಗುವಂತೆ ಸಚಿವ ಸ್ಥಾನ ಕೂಡ ಸಿಕ್ಕಿದೆ. ಈ ನಡುವೆ ಎಲ್ಲರ ಗಮನ ಸೆಳೆಯುತ್ತಿರುವುದು ದೀಪಕ್ ಎಂಬ ಸಚಿವ.

ಹೌದು, ನಿತೀಶ್ ಕುಮಾರ್ ಸಂಪುಟದಲ್ಲಿ ಸ್ಥಾನ ಪಡೆದ ದೀಪಕ್ ಎಂಬ ಸಚಿವ ಇದೀಗ ಎಲ್ಲರ ಗಮನ ಸೆಳೆದಿದ್ದಾರೆ. ಯಾಕೆಂದರೆ ಈತ ಚುನಾವಣೆಗೂ ನಿಲ್ಲಲಿಲ್ಲ, ಎಂಎಲ್ಸಿ ಕೂಡ ಆಗಿಲ್ಲ. ಹೇಗಿದ್ದರೂ ಕೂಡ ಮಂತ್ರಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಹಾಗಿದ್ರೆ ಯಾರು ಈತ? ಇಷ್ಟೊಂದು ಪ್ರಾಮುಖ್ಯತೆ ಏಕೆ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ವಿಚಾರ.
ಯಸ್, ನಿತೀಶ್ ಕುಮಾರ್ ಸಂಪುಟದಲ್ಲಿ ಮೊದಲ ಬಾರಿಗೆ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ದೀಪಕ್ ಪ್ರಕಾಶ್ ಇದುವರೆಗೂ ಯಾವುದೇ ಚುನಾವಣೆಯನ್ನು ಎದುರಿಸಿಲ್ಲ. ಶಾಸಕ ಅಥವಾ ವಿಧಾನ ಪರಿಷತ್ ಸದಸ್ಯರೂ ಅಲ್ಲ. ಆದರೂ, ಅವರಿಗೆ ಮಂತ್ರಿಗಿರಿ ಸಿಕ್ಕಿದೆ. ಕರಾಣ ದೀಪಕ್ ಪ್ರಕಾಶ್ ಸಾಮಾನ್ಯ ವ್ಯಕ್ತಿಯಲ್ಲ, ಪ್ರತಿಷ್ಠಿತ ರಾಜಕೀಯ ಹಿನ್ನೆಲೆ ಇರುವ, ರಾಷ್ಟ್ರೀಯ ಲೋಕ ಮೋರ್ಚಾ ಪಕ್ಷದ ಮಾಜಿ ಕೇಂದ್ರ ಸಚಿವ, ಬಿಹಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯ ನಿರ್ವಹಿಸಿರುವ ಮತ್ತು ಹಾಲಿ ರಾಜ್ಯಸಭಾ ಸಂಸದರಾಗಿರುವ ಉಪೇಂದ್ರ ಕುಶ್ವಾಹ ಮತ್ತು ಸಸರಾಮ್ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕಿ ಸ್ನೇಹಲತಾ ಅವರ ಮಗ.
ನಿತೀಶ್ ಕುಮಾರ್ ಸರ್ಕಾರದಲ್ಲಿ ಆರ್ಎಲ್ಎಮ್ ಪಕ್ಷದ ಕೋಟಾದಿಂದ ಸ್ನೇಹಲತಾ ಕುಶ್ವಾಹಾ ಅವರೇ ಸಚಿವರಾಗಬಹುದು ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಉಪೇಂದ್ರ ಕುಶ್ವಾಹಾ ತಮ್ಮ ಪಕ್ಷದ ಬೆಳವಣಿಗೆ ದೃಷ್ಟಿಯಿಂದ ಪುತ್ರನ ಹೆಸರನ್ನು ಮುಂದೆ ತಂದು ಸಚಿವರನ್ನಾಗಿ ನೇಮಿಸಿದ್ದಾರೆ ಎನ್ನಲಾಗಿದೆ.
ರಾಜಕೀಯ ವಿಶ್ಲೇಷಕರ ಪ್ರಕಾರ, ದೀಪಕ್ ಪ್ರಕಾಶ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿರುವುದರಿಂದ NDA ಸರ್ಕಾರದ ಲವ್–ಕುಶ್ ಸಮೀಕರಣವನ್ನು ಬಲಪಡಿಸುವ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. ಅಂದರೆ ಕುರ್ಮಿ ಮತ್ತು ಕುಶ್ವಾಹಾ ಸಮುದಾಯಗಳು ಬಿಹಾರದ ಪ್ರಮುಖ ರಾಜಕೀಯ ಶಕ್ತಿಗಳಾಗಿದ್ದು, ನಿತೀಶ್ ಕುಮಾರ್ ಮತ್ತು ಉಪೇಂದ್ರ ಕುಶ್ವಾಹಾ ಇಬ್ಬರೂ ಈ ವರ್ಗಗಳ ಪ್ರತಿನಿಧಿಗಳಾಗಿದ್ದಾರೆ. ಹಾಗಾಗಿ, ದೀಪಕ್ ಅವರ ಪ್ರವೇಶದೊಂದಿಗೆ ಕುಶ್ವಾಹಾ ಸಮುದಾಯದ ಪ್ರತಿನಿಧಿತ್ವ ಸಚಿವ ಸಂಪುಟದಲ್ಲಿ ದೃಢಪಟ್ಟಿದೆ.
Comments are closed.