Beluru: ಬೇಲೂರಲ್ಲೊಂದು ‘ಕನ್ನಡದ’ ಅಂಗಡಿ – ಇಲ್ಲಿಗೆ ಹೋದ್ರೆ ಸಿಗುತ್ತೆ ಬರೀ ಹಳದಿ, ಕೆಂಪು ಬಣ್ಣದ ವಸ್ತು !!

Beluru: ಅಂಗಡಿಗಳ ಮುಂದೆ ಕನ್ನಡದ ಬೋರ್ಡ್ ಹಾಕಿ ಎಂದರೆ ಅಧಿಕಪ್ರಸಂಗ ರೀತಿ ವರ್ತಿಸುವ ಅಂಗಡಿ ಮಾಲೀಕರೇ ಹೆಚ್ಚಾಗಿ ಗೋಚರಿಸುತ್ತಾರೆ. ಆದರೆ ಬೇಲೂರಲ್ಲಿ ಒಬ್ಬ ಅಂಗಡಿ ಮಾಲೀಕ ತನ್ನ ಇಡೀ ಅಂಗಡಿಯನ್ನೇ ಕನ್ನಡಮಯವಾಗಿಸಿದ್ದಾರೆ.

ಹೌದು, ಬೇಲೂರಿನ ಅಂಗಡಿಯ ಮಾಲೀಕರೊಬ್ಬರು ನವೆಂಬರ್ ತಿಂಗಳಿನಲ್ಲಿ ಇಡೀ ತಮ್ಮ ಅಂಗಡಿಯನ್ನು ಕನ್ನಡಮಯವಾಗಿಸುತ್ತಾರೆ. ಅಂದರೆ ಇಲ್ಲಿಗೆ ಹೋದಾಗ ನಮಗೆ ಯೋಚನೆವಾಗುವುದು ಬರಿ ಹಳದಿ, ಕೆಂಪು ಬಣ್ಣದ ವಸ್ತುಗಳು ಮಾತ್ರ. ಇವರು ನವೆಂಬರ್ ತಿಂಗಳಲ್ಲಿ ಕನ್ನಡ ಭಾವುಟದ ಬಣ್ಣದ ಪ್ರಾಡಕ್ಟ್ಗಳನ್ನೇ ಮಾರಾಟ ಮಾಡಿ ತಮ್ಮ ಕನ್ನಡ ಅಭಿಮಾನವನ್ನು ತೋರುತ್ತಾರೆ. ಬಾಸ್ಕೆಟ್, ಬಕೆಟ್ ಕುರ್ಚಿಯಿಂದ ಹಿಡಿದು ಪ್ರತಿಯೊಂದು ವಸ್ತುಗಳು ಕೆಂಪು ಹಾಗೂ ಹಳದಿ ಬಣ್ಣದಲ್ಲೇ ದೊರೆಯುವುದು ವಿಶೇಷ. ಕನ್ನಡಿಗರ ಅಂಗಡಿಯಾದ ಶ್ರೀ ಮಾರುತಿ ಸ್ಟೋರ್ ಶಕ್ತಿ ಟೂಲ್ಸ್ ಇರುವುದು ಹಾಸನ ಜಿಲ್ಲೆಯ ಬೇಲೂರಿನಲ್ಲಿ. ಈ ವಿಶೇಷ ಹಾಗೂ ಆಕರ್ಷಕ ಅಂಗಡಿಯ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.
ಕಂಟೆಂಟ್ ಕ್ರಿಯೇಟರ್ ಒಬ್ಬರು ಇವರ ಅಂಗಡಿಗೆ ಭೇಟಿ ಕೊಟ್ಟಿದ್ದು ಈ ವೇಳೆ ಮಾಲೀಕ ನಾವು ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಕರ್ನಾಟಕದ ಭಾವುಟದ ಬಣ್ಣದ ಪ್ರಾಡಕ್ಟ್ ಗಳನ್ನೇ ಮಾರಾಟ ಮಾಡ್ತೇವೆ. ಈ ಪ್ರಾಡಕ್ಟ್ ಗಳಿಗೆ ಶೇಕಡಾ ಇಪ್ಪತ್ತರಷ್ಟು ರಿಯಾಯಿತಿ ನೀಡ್ತೇವೆ. ಇದರ ಮೂಲ ಉದ್ದೇಶವೇ ಕನ್ನಡ ಕಲಿಯಬೇಕು, ಕನ್ನಡ ಉಳಿಸಬೇಕು, ಕನ್ನಡ ತಾಯಿಗೆ ಗೌರವ ಕೊಡಬೇಕು ಎನ್ನುವುದಾಗಿದೆ. 2008 ರಲ್ಲಿ ಡಾ. ರಾಜ್ ಕುಮಾರ್ ಸಂಘದ ಅಧ್ಯಕ್ಷನಾಗಿದ್ದೆ. ಅಲ್ಲಿಂದ ಈ ವಿಭಿನ್ನ ರೀತಿ ಪ್ರಾಡಕ್ಟ್ ಗಳನ್ನು ಮಾರಾಟ ಮಾಡ್ತಾ ಇದ್ದೇನೆ ಎಂದು ಹೇಳಿದ್ದಾರೆ.
ಇಷ್ಟೇ ಅಲ್ಲದೆ ಈ ಅಂಗಡಿಯ ಮುಂಭಾಗದಲ್ಲಿ ನಿಲ್ಲಿಸಲಾದ ಮಾಲೀಕರ ಸ್ಕೂಟರ್ ಹಳದಿ ಹಾಗೂ ಕೆಂಪು ಬಣ್ಣದಲ್ಲಿ ಇರುವುದು ಮತ್ತೊಂದು ವಿಶೇಷ ಎನ್ನಬಹುದು. ಇನ್ನು ಈ ವ್ಯಕ್ತಿಯ ಹಣೆ ಮೇಲೆ ಕೆಂಪು ಹಳದಿ ಬಣ್ಣಗಳು ರಾರಾಜಿಸುತ್ತಿವೆ ಹಾಗೂ ಕೈ ಮೇಲೆ ಕನ್ನಡಿಗ ಎಂದು ಟ್ಯಾಟೂ ಹಾಕಿಸಿಕೊಂಡಿರುವುದನ್ನು ಕಾಣಬಹುದು.
Comments are closed.