ಸಂಕಷ್ಟಕ್ಕೆ ಬಿದ್ದ ಅನಿಲ್ ಅಂಬಾನಿ: ಇ.ಡಿ.ಯಿಂದ ₹1400 ಕೋ. ಆಸ್ತಿ ಜಪ್ತಿ

Share the Article

ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಉದ್ಯಮಿ, ಅಂಬಾನಿ ಕುಟುಂಬದ ಎರಡನೆಯ ಕುಡಿಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಅನಿಲ್ ಅಂಬಾನಿಗೆ ಸೇರಿದ 1,400 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಗುರುವಾರ ಜಪ್ತಿ ಮಾಡಿಕೊಂಡಿದೆ.

ಈ ಹಿಂದೆ ಬರೋಬ್ಬರಿ 7,500 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿತ್ತು. ಈ ಮೂಲಕ ಈ ತನಕ ಅನಿಲ್ ಅಂಬಾನಿಗೆ ಸೇರಿದ 9,000 ಕೋಟಿ ರೂ. ಗೂ ಹೆಚ್ಚಿನ ಆಸ್ತಿ ಇ.ಡಿ. ವಶಪಡಿಸಿಕೊಂಡ ಹಾಗಾಗಿದೆ. ಅದಾಗ್ಯೂ, ಅನಿಲ್ ಒಡೆತನದ ರಿಲಯನ್ಸ್ ಸಂಸ್ಥೆಯಿಂದ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ. ಅನಿಲ್ ಹಲವು ಬ್ಯಾಂಕ್‌ಗಳಿಗೆ ಸಾಲ ಮರುಪಾವತಿಸದ ಕಾರಣ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಉದ್ಯಮದಲ್ಲಿ ಚೇತರಿಸಿಕೊಂಡು ಆರ್ಥಿಕವಾಗಿ ಮತ್ತೆ ಉಚ್ಛ್ರಾಯ ಸ್ಥಿತಿಗೆ ಬರುತ್ತಿರುವ ಸಂದರ್ಭ ಈ ಇಡಿ ಏಟು ಬಲವಾದ ಪೆಟ್ಟನ್ನೆ ನೀಡಿದೆ ಎನ್ನಲಾಗುತ್ತಿದೆ.

Comments are closed.