Marriage: ದೈಹಿಕ ಸಂಪರ್ಕಕ್ಕೆ ಒಪ್ಪದ ಗಂಡನನ್ನು ವಿಷ ಕುಡಿಸಿ ಹತ್ಯೆಗೆ ಯತ್ನಿಸಿದ ಪತ್ನಿ!

Share the Article

Marriage: ದೈಹಿಕ ಸಂಪರ್ಕಕ್ಕೆ ನಿರಾಕರಿಸಿದ ಗಂಡನಿಗೆ ಪತ್ನಿ ವಿಷವಿಕ್ಕಿ (Poison) ಕೊಲ್ಲಲು ಯತ್ನಿಸಿದ ಶಾಕಿಂಗ್ ಘಟನೆ (Crime) ಉತ್ತರ ಪ್ರದೇಶದ (Uttar Pradesh) ಮುಜಾಫರ್ನಗರದಲ್ಲಿ (Muzaffarnagar) ನಡೆದಿದೆ.

ಮಹಿಳೆ ಪಿಂಕಿ ತನ್ನ ಪತಿ ಅನುಜ್ ಶರ್ಮಾ ನನ್ನು ಕೊಲ್ಲಲು ಯತ್ನಿಸಿದ ಪಾಪಿ ಪತ್ನಿ. ದಂಪತಿ 2023 ರಲ್ಲಿ ಮದುವೆಯಾಗಿದ್ದರು. ಆದರೆ ಅನುಜ್‌ಗೆ ಪತ್ನಿಯೊಂದಿಗೆ ದೈಹಿಕ ಸಂಪರ್ಕದಲ್ಲಿ ಆಸಕ್ತಿ ಇರಲಿಲ್ಲ. ದಾಂಪತ್ಯ ಜೀವನದ ಎರಡು ವರ್ಷದಲ್ಲಿ ಇಬ್ಬರು ಕೇವಲ ಎರಡು ಬಾರಿ ಮಾತ್ರ ಸೇರಿದ್ದರು ಎಂದು ದೂರಲಾಗಿದೆ.

ಆದರೂ ಮಹಿಳೆ ಪಿಂಕಿ ದೈಹಿಕ ಸಂಪರ್ಕಕ್ಕಾಗಿ ಅನುಜ್‌ನನ್ನು ಪದೇ ಪದೇ ಪೀಡಿಸುತ್ತಿದ್ದರು. ಆದರೆ ಇದಾವುದಕ್ಕೂ ಅನುಜ್‌ ಆಸಕ್ತಿ ತೋರುತ್ತಿರಲಿಲ್ಲ.ಪತಿಯ ವರ್ತನೆಯಿಂದ ಬೇಸತ್ತ ಮಹಿಳೆ ಆತನಿಗೆ ವಿಷವಿಕ್ಕಿ ಕೊಲ್ಲಲು ಯತ್ನಿಸಿದ್ದಾಳೆ. ಅದೃಷ್ಟವಶಾತ್ ಅನುಜ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.