Nithish Kumar: 10ನೇ ಬಾರಿ ಸಿಎಂ ಆದ ನಿತೀಶ್ ಕುಮಾರ್ ಒಟ್ಟು ಆಸ್ತಿ ಎಷ್ಟು?

Nithish Kumar : ನಿತೀಶ್ ಕುಮಾರ್ ಅವರು ಬಿಹಾರದಲ್ಲಿ ಹತ್ತನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನವನ್ನು ಸ್ವೀಕರಿಸಿದ್ದಾರೆ. ಇತ್ತೀಚಿಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 80 ಹೆಚ್ಚು ಸ್ಥಾನಗಳನ್ನು ಗೆದ್ದ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷವು, ಬಿಜೆಪಿ ನೇತೃತ್ವದ NDA ಮೈತ್ರಿ ಕೂಟಗಳಲ್ಲಿ ಪ್ರಮುಖ ಸ್ಥಾನ ಪಡೆದಿದ್ದು, ಇದೀಗ ಮಿತ್ರ ಪಕ್ಷಗಳ ಬಲದಿಂದಾಗಿ ಸರ್ಕಾರ ರಚನೆಗೆ ಮುಂದಾಗಿದೆ. ಈ ನಡುವೆ ನಿತೀಶ್ ಕುಮಾರ್ ಅವರ ಒಟ್ಟು ಆಸ್ತಿ ಎಷ್ಟು ಎಂಬುದರ ಕುರಿತು ಚರ್ಚೆಗಳು ಜೋರಾಗಿವೆ.

ನಿತೀಶ್ ಕುಮಾರ್ ಅವರ ನಿವ್ವಳ ಮೌಲ್ಯ ಸುಮಾರು ₹1.65 ಕೋಟಿ. ಅವರ ಆಸ್ತಿಯಲ್ಲಿ ಸ್ಥಿರ ಆಸ್ತಿ ಮತ್ತು ಉಳಿತಾಯ ಸೇರಿವೆ ಮತ್ತು ಅವರಿಗೆ ಯಾವುದೇ ಪ್ರಮುಖ ಸಾಲಗಳಿಲ್ಲ ಎಂದು ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ದಾಖಲೆಗಳಿಂದ ತಿಳಿದುಬರಲಿದೆ.
ಅಂದಹಾಗೆ ಪಕ್ಷ ಕಟ್ಟುವ ಕೆಲಸದಲ್ಲಿದ್ದ ನಿತೀಶ್ ಕುಮಾರ್ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಪಡೆದರು. 1985 ರಲ್ಲಿ ಅವರು ಹರ್ನೌತ್ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದರು. ಚುನಾವಣೆ ಗೆದ್ದ ಬಳಿಕ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಡಲು ತಮ್ಮದೆ ತಂತ್ರ ರೂಪಿಸಿದರು. ಹಾಗೆ ಮುಂದಿನ ಹಲವು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ಇದೀಗ ಅವರು ಹತ್ತನೇ ಬಾರಿ ಬಿಹಾರದ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿ ಇಡೀ ದೇಶದಲ್ಲಿ ದಾಖಲೆ ಬರೆದಿದ್ದಾರೆ.
Comments are closed.