Cockroach Sudhi: ಸಡನ್ ಆಗಿ ಚಂದ್ರಪ್ರಭ ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ಯಾಕೆ? ಅಸಲಿ ಕಾರಣ ಬಿಚ್ಚಿಟ್ಟ ಕಾಕ್ರೋಚ್ ಸುಧಿ

Share the Article

Cockroach Sudhi : ಹೋದ ವಾರ ಬಿಗ್ ಬಾಸ್ ಕನ್ನಡ 12 ನಿಂದ ಖ್ಯಾತ ಹಾಸ್ಯಗಾರ ಚಂದ್ರಪ್ರಭಾ ಅವರು ಹೊರಬಂದಿದ್ದರು. ಸುದೀಪ್ ಅವರು ಅವರನ್ನು ಗೌರವಯುತವಾಗಿ ಮನೆಯಿಂದ ಕಳುಹಿಸಿಕೊಟ್ಟಿದ್ದಾರೆ. ಆದರೆ ಈ ಮೊದಲು ಸುದೀಪ ಅವರು ಮಾತನಾಡುತ್ತಿದ್ದಾಗ ಚಂದ್ರ ಪ್ರಭ ಅವರು ಇದ್ದಕ್ಕಿದ್ದಂತೆ ಗೆದ್ದು ಮನೆಯಿಂದ ಹೊರ ನಡೆದಿದ್ದರು. ಬಳಿಕ ಮನೆ ಮಂದಿ ಎಲ್ಲಾ ಅವರನ್ನು ಕನ್ವಿನ್ಸ್ ಮಾಡಿ ವಾಪಸ್ಸು ಕರೆತಂದಿದ್ದರು.

ಕೊನೆಗೆ ಸುದೀಪ ಅವರು ಚಂದ್ರಪ್ರಭ ಅವರೇ ಈ ವಾರ ಮನೆಯಿಂದ ಹೊರ ಬರಬೇಕೆಂದು ಜನರು ನಿರ್ಧರಿಸಿದ್ದಾರೆ ಹೀಗಾಗಿ ದಯವಿಟ್ಟು ಲಗೇಜ್ ಪ್ಯಾಕ್ ಮಾಡಿಕೊಂಡು ಮನೆಯಿಂದ ಹೊರಡಿ ಎಂದು ಹೇಳಿದ್ದರು. ಈ ವೇಳೆಯೂ ಕೂಡ ಚಂದ್ರ ಪ್ರಭಾವರು ಮನೆಯವರ ಮಾತಿಗೆ ಕ್ಯಾರೆ ಎನ್ನದೆ ತುಂಬಾ ಬೇಸರದಿಂದಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದರು. ಚಂದ್ರಪ್ರಭ ಅವರು ಯಾಕೆ ಈ ರೀತಿ ಮಾಡಿದರು ಎಂಬುದು ಹಲವಾರು ವೀಕ್ಷಕರಿಗೆ ಗೊಂದಲ ಉಂಟು ಮಾಡಿತ್ತು. ಈಗ ಅವರು ಯಾಕೆ ಹೊರಬಂದರು ಎಂಬುದಾಗಿ ಇತ್ತೀಚಿಗಷ್ಟೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದ ಕಾಕ್ರೋಚ್ ಸುಧಿ ಅವರು ಕಾರಣ ಕೊಟ್ಟಿದ್ದಾರೆ.

ಹೊರಬಂದು ಮಾಧ್ಯಮದವರೊಂದಿಗೆ ಮಾತನಾಡಿದ ಕಾಕ್ರೋಚ್ ಸುಧಿ ಅವರು ಚಂದ್ರಪ್ರಭ ಕುರಿತ ಪ್ರಶ್ನೆಗೂ ಉತ್ತರ ನೀಡಿದ್ದಾರೆ. ‘ಚಂದ್ರಪ್ರಭ ಅವರಿಗೆ ಸೊಂಟು ನೋವು ತುಂಬಾ ಕಾಡುತ್ತಿತ್ತು. ಇದರಿಂದ ಅವರು ಬಹಳ ಒದ್ದಾಡುತ್ತಿದ್ದರು. ನನಗೆ ಗೊತ್ತಿದ್ದಂತೆ ಅದೇ ಕಾರಣಕ್ಕೆ ಅವರು ಹೊರಬಂದರು. ಈಗ ಅವರಿಗೆ ನಾನು ಫೋನ್ ಮಾಡಿ ಕೇಳಬೇಕು. ಬಿಗ್ ಬಾಸ್ ಮನೆಯಲ್ಲಿ ಅವರು ಹೊರಟಾಗ ಕೇವಲ 5 ನಿಮಿಷ ಅವಕಾಶ ಇತ್ತು. ಆಗ ಅವರು ಏನೂ ಹೇಳಲಿಲ್ಲ’ ಎಂದು ಹೇಳಿದ್ದಾರೆ.

Comments are closed.