Train Ticket : ಟ್ರೈನ್ ಟಿಕೆಟ್ ಬುಕ್ ಮಾಡುವಾಗ ಕೆಳಗಡೆಯ ಬರ್ತ್ ಸಿಗಬೇಕೇ? ಈ ಸಿಂಪಲ್ ಟ್ರಿಕ್ಸ್ ಯೂಸ್ ಮಾಡಿ

Share the Article

Train Ticket : ದೂರದ ಊರಿಗೆ ರೈಲಿನಲ್ಲಿ ಹೋಗುವವರು ಸಾಮಾನ್ಯವಾಗಿ ರಾತ್ರಿ ವೇಳೆ ಜರ್ನಿ ಮಾಡುತ್ತಾರೆ. ಅದರಲ್ಲೂ ಅವರೆಲ್ಲರೂ ಸ್ಲೀಪರ್ಗಳನ್ನು ಬುಕ್ ಮಾಡಿಕೊಂಡು ಪ್ರಯಾಣಿಸುತ್ತಾರೆ. ಈ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಕೆಳಗಡೆ ಬರ್ತ್ ಗಳು ಸಿಕ್ಕಿದರೆ ತುಂಬಾ ಅನುಕೂಲವಾಗುತ್ತದೆ. ಆದರೆ ಬುಕ್ ಮಾಡುವಾಗ ಒಮ್ಮೊಮ್ಮೆ ಅಪ್ಪರ್ ಬರ್ತ್ ಗಳು ಕೂಡ ಲಭ್ಯವಾಗುತ್ತದೆ. ಆದರೆ ನೀವು ಈ ಒಂದು ಸಿಂಪಲ್ ಟ್ರಿಕ್ಸ್ ಯೂಸ್ ಮಾಡಿದರೆ ಟ್ರೈನ್ ಟಿಕೆಟ್ ಬುಕ್ ಮಾಡುವಾಗ ಯಾವಾಗಲೂ ಕೆಳಗಡೆ ಬರ್ತ್ ಸಿಗುತ್ತದೆ.

ಹೌದು, ಇತ್ತೀಚೆಗೆ ಪ್ರಯಾಣ ಟಿಕೆಟ್ ಪರೀಕ್ಷಕರೊಬ್ಬರು (TTE) ಹಿರಿಯ ನಾಗರಿಕರು ಸುಲಭವಾಗಿ ಕೆಳ ಬರ್ತ್‌ ಅನ್ನು ಪಡೆಯಲು ಹೇಗೆ ಟಿಕೆಟ್‌ ಬುಕಿಂಗ್‌ ಮಾಡಬಹುದು ಎಂದು ಹೇಳಿಕೊಟ್ಟಿದ್ದಾರೆ. ವಿಡಿಯೋದಲ್ಲಿ ಮಾತನಾಡಿದರುವ ಟಿಟಿಇ, ಈ ನಾಲ್ವರು ಹಿರಿಯ ನಾಗರಿಕ ಪ್ರಯಾಣಿಕರಿಗೆ ಮಿಡಲ್‌ ಹಾಗೂ ಅಪ್ಪರ್‌ ಬರ್ತ್‌ ಸಿಕ್ಕಿದೆ. ಇವರೆಲ್ಲರೂ ಹಿರಿಯ ನಾಗರಿಕರಾಗಿದ್ದರೂ ಲೋವರ್‌ ಬರ್ತ್‌ ಏಕೆ ಸಿಕ್ಕಿಲ್ಲ ಎನ್ನೋದು ಪ್ರಶ್ನೆ. ಹಾಗಿದ್ದಾಗ ಅವರು ನಾಲ್ವರು ಒಟ್ಟಿಗೆ ಟಿಕೆಟ್‌ ಮಾಡುವ ಬದಲು ಇಬ್ಬರಿಬ್ಬರು ಒಟ್ಟಿಗೆ ಟಿಕೆಟ್‌ ಮಾಡಬೇಕಾಗುತ್ತದೆ. ಆಗ ಮಾತ್ರವೇ ಲೋವರ್‌ ಬರ್ತ್‌ ಸಿಗುತ್ತದೆ. ನಾಲ್ವರು ಒಟ್ಟಿಗೆ ಟಿಕೆಟ್‌ ಬುಕ್‌ ಮಾಡುವುದರಿಂದ ಆಟೋಮೆಟಿಕ್‌ ಆಗಿ ಮಧ್ಯಮ ಇಲ್ಲವೇ ಅಪ್ಪರ್‌ ಬರ್ತ್‌ ಸಿಗುತ್ತದೆ ಎಂದು ವಿವರಿಸಿದ್ದಾರೆ.

ಮೂವರು ನಾಲ್ಕು ಜನ ಒಟ್ಟೊಟ್ಟಿಗೆ ಟಿಕೆಟ್ ಬುಕ್ ಮಾಡಿದಾಗ ಕಂಪ್ಯೂಟರ್ ಆಟೋಮೆಟಿಕ್ ಆಗಿ ಸೀರಿಯಲ್ ಪ್ರಕಾರ ಸೀಟ್ಗಳನ್ನು ಅಲೋಟ್ ಮಾಡುತ್ತದೆ. ಆದರೆ ನಾಲ್ವರಲ್ಲಿ ಇಬ್ಬರು ಇಬ್ಬರು ಬೇರೆ ಬೇರೆ ಮಾಡಿದರೆ ಲೋವರ್ ಬರ್ತ್ ಸಿಗುತ್ತದೆ. ಹಿರಿಯ ನಾಗರೀಕರು ಯಾವಾಗಲೂ ಈ ರೀತಿಯ ಟಿಕೆಟ್ ಬುಕ್ ಮಾಡಿ ಎಂದು ಅವರ ಸಲಹೆ ನೀಡಿದ್ದಾರೆ.

Comments are closed.