Rahul Gandhi: ಕಾರ್ಯಕ್ರಮಕ್ಕೆ ತಡವಾಗಿ ಬಂದ ರಾಹುಲ್ ಗಾಂಧಿಗೆ -ಡಿಪ್ಸ್ ಹೊಡೆಯುವ ಶಿಕ್ಷೆ ಕೊಟ್ಟ ಆಯೋಜಕರು!!

Share the Article

Rahul Gandhi : ಕಾರ್ಯಕ್ರಮವೊಂದಕ್ಕೆ ತಡವಾಗಿ ಬಂದ ರಾಹುಲ್ ಗಾಂಧಿಯವರಿಗೆ ಡಿಪ್ಸ್ ಹೊಡೆಯುವ ಶಿಕ್ಷೆ ಲಭಿಸಿದೆ. ಸುಮಾರು 10 ಡಿಪ್ಸ್ ತೆಗೆದ ರಾಹುಲ್ ಗಾಂಧಿಯವರು, ತಡವಾಗಿ ಬಂದದ್ದಕ್ಕೆ ತಮಗೆ ತಾವೇ ಶಿಕ್ಷೆಯನ್ನು ಕೊಟ್ಟು ಕೊಂಡಿದ್ದಾರೆ.

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಕಾಂಗ್ರೆಸ್ ವತಿಯಿಂದ ಆಯೋಜನೆಗೊಂಡಿದ್ದ ತರಬೇತಿ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿಯವರು ಸ್ವಲ್ಪ ತಡವಾಗಿ ಬಂದರು.ಬಳಿಕ ರಾಹುಲ್ ಗಾಂಧಿಯವರು 10 ಡಿಪ್ಸ್ ಹೊಡೆಯುವ ಶಿಕ್ಷೆಗೆ ಗುರಿಯಾದ ಸ್ವಾರಸ್ಯಕರ ಸಂಗತಿ ನಡೆದಿದೆ.

ಅಂದಹಾಗೆ ಕಾರ್ಯಕ್ರಮಕ್ಕೆ ಕೊಂಚ ತಡವಾಗಿ ಆಗಮಿಸಿದರು. ಈ ವೇಳೆ ತರಬೇತಿ ಮುಖ್ಯಸ್ಥರಾಗಿದ್ದ ಸಚಿನ್ ರಾವ್, ತಡವಾಗಿ ಆಗಮಿಸಿದವರು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದರು. ನಾನೇನು ಮಾಡಬೇಕು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದಾಗ, “10 ಭಸ್ಕಿ ಹೊಡೆಯಬೇಕು” ಎಂದು ಸಚಿನ್ ರಾವ್ ತಮಾಷೆಯಾಗಿ ಸೂಚಿಸಿದರು. ಬಿಳಿ ಟಿ ಶರ್ಟ್ ಹಾಗೂ ಪ್ಯಾಂಟ್ ತೊಟ್ಟಿದ್ದ ರಾಹುಲ್ ಗಾಂಧಿ, ಅವರ ಸೂಚನೆಯಂತೆ ತಕ್ಷಣವೇ ಭಸ್ಕಿ ಹೊಡೆಯಲು ಪ್ರಾರಂಭಿಸಿದರು. ಅವರಿಗೆ ಜಿಲ್ಲಾಧ್ಯಕ್ಷರೂ ಜೊತೆ ನೀಡಿದರು. ಸಚಿನ್ ರಾವ್ ಅವರ ಈ ತುಂಟ ಶಿಕ್ಷೆಯು ಕೆಲವೇ ಕ್ಷಣಗಳಲ್ಲಿ ತಂಡದ ದೈಹಿಕ ವ್ಯಾಯಾಮವಾಗಿ ರೂಪಾಂತರಗೊಂಡಿತು.

Comments are closed.