Jammu Kashmir : ಚಲಿಸುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದ ಹದ್ದು – ಗಾಜು ಪುಡಿ ಪುಡಿ, ಚಾಲಕನಿಗೆ ಗಾಯ!!

Share the Article

Jammu Kashmir : ಆಕಾಶದಲ್ಲಿ ವಿಮಾನ ಹಾರಾಟ ನಡೆಸುವಾಗ ಹಕ್ಕಿಗಳು ರೆಕ್ಕೆಗೆ ಬಡಿದು ವಿಮಾನ ಅಪಘಾತಗಳು ಸಂಭವಿಸಿರುವ ಘಟನೆಗಳನ್ನು ನಾವು ನೋಡಿದ್ದೇವೆ. ಆದರೆ ಇದೀಗ ಚಲಿಸುತ್ತಿದ್ದ ರೈಲಿಗೆ ಹದ್ದು ಒಂದು ಡಿಕ್ಕಿ ಹೊಡೆದು, ಅದರ ಗಾಜು ಪುಡಿಪುಡಿಯಾಗಿ ಚಾಲಕನಿಗೆ ಗಾಯಗಳಾಗಿರುವ ಘಟನೆ ನಡೆದಿದೆ.

ಜಮ್ಮುಕಾಶ್ಮೀರದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಜ್ಬೆಹರ್‌ನಿಂದ ಅನಂತ್‌ನಾಗ್‌ನತ್ತ ತೆರಳುತ್ತಿದ್ದ, ಬಾರಾಮುಲ್ಲಾ ಬನಿಹಾಲ್ ರೈಲಿನಲ್ಲಿ ಈ ಘಟನೆ ನಡೆದಿದೆ. ಹದ್ದೊಂದು ರೈಲಿಗೆ ಡಿಕ್ಕಿ ಹೊಡೆದು ರೈಲಿನ ಒಳಭಾಗಕ್ಕೆ ಬಂದು ಬಿದ್ದಿದೆ. ಹಕ್ಕಿ ಡಿಕ್ಕಿ ಹೊಡೆದ ರಭಸಕ್ಕೆ ರೈಲಿನ ಮುಂಭಾಗದ ಗಾಜು ಕಲ್ಲೆಸೆದಂತೆ ಛಿದ್ರವಾಗಿದೆ. ಅಲ್ಲದೆ ಅವಡೆದ ಗಾಜುಗಳು ಲೋಕೋ ಪೈಲೆಟ್ ಮುಖಕ್ಕೆ ಚುಚ್ಚಿ ಗಾಯಗಳಾಗಿವೆ.

ಲೋಕೋಮೋಟಿವ್ ಪೈಲಟ್‌ ಈ ಘಟನೆಯ ಬಗ್ಗೆ ರೇಡಿಯೋ ಮೂಲಕ ಮಾಹಿತಿ ನೀಡಿದ್ದು, ಅವರ ಮುಖದ ಮೇಲೆ ಸ್ವಲ್ಪ ಗಾಯವಾಗಿದೆ. ತರಚಿದಂತೆ ಗಾಯಗಳಾಗಿದ್ದು, ಅವರು ಕರ್ತವ್ಯ ಮುಂದುವರೆಸಿದ್ದಾರೆ. ನಂತರ ಅನಂತ್‌ನಾಗ್ ರೈಲು ನಿಲ್ದಾಣದಲ್ಲಿ ರೈಲು ನಿಂತ ನಂತರ ಲೋಕೋಮೋಟಿವ್ ಪೈಲಟ್‌ಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಇತ್ತ ವೇಗವಾಗಿ ಸಾಗುತ್ತಿದ್ದ ರೈಲಿಗೆ ಗುದ್ದಿದ ರಭಸಕ್ಕೆ ಹದ್ದಿಗೂ ಹಾನಿಯಾಗಿದ್ದು, ರೈಲಿನೊಳಗಿದ್ದ ಹದ್ದು ನಡೆಯಲಾಗದೆ ಒಂದು ಕಡೆ ವಾಲಿದ್ದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ.

Comments are closed.