Anupama: ನಟಿ ಅನುಪಮಾ ಪರಮೇಶ್ವರನ್ ಗೆ 20 ವರ್ಷದ ಯುವತಿಯಿಂದ ‘ಆ’ ಕಾಟ !!

Anupama: ನಟಸಾರ್ವಭೌಮ ಚಿತ್ರದಲ್ಲಿ ನಟಿಸಿದ್ದ ಮಲಯಾಳಂ ಮೂಲದ ನಟಿ ಅನುಪಮಾ ಪರಮೇಶ್ವರನ್ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಕುರಿತಾಗಿ ಅನುಚಿತ ವರ್ತನೆ, ಮಾರ್ಫಿಂಗ್ ಚಿತ್ರಗಳನ್ನ ಮಾಡಿ ಪೋಸ್ಟ್ ಮಾಡುತ್ತಿದ್ದ ಸೈಬರ್ ಕಿರುಕುಳದ ವಿಚಾರವನ್ನ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದಾರೆ. ವಿಶೇಷ ಅಂದ್ರೆ ಈ ಅಪರಾಧ ಎಸಗಿದ್ದು ತಮಿಳುನಾಡಿನ 20 ವರ್ಷ ವಯಸ್ಸಿನ ಯುವತಿಯಿಂದ!!

ಹಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ನಕಲಿ ಖಾತೆಯಿಂದ ಮಾರ್ಫಿಂಗ್ ಮಾಡಲಾದ ಫೋಟೋಗಳು ಹಾಗೂ ಅನುಚಿತ ವಿಷಯವನ್ನೊಳಗೊಂಡ ಫೋಟೋಗಳನ್ನ ಪೋಸ್ಟ್ ಮಾಡಲಾಗುತ್ತಿದ್ದ ವಿಚಾರ ಅನುಪಮ ಗಮನಕ್ಕೆ ಬಂದಿದೆ. ಈ ವಿಚಾರ ತಿಳಿದ ಕೂಡಲೇ ಸೈಬರ್ ಅಪರಾಧ ವಿಭಾಗಕ್ಕೆ ದೂರು ಕೊಡುತ್ತಾರೆ. ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಹುಡುಕಿ ಬಂಧಿಸಿ ಕರೆತಂದಾಗ ಆಕೆ 20 ವರ್ಷದ ಯುವತಿ ಅನ್ನುವುದು ಗೊತ್ತಾಗಿದೆ.
ಇನ್ನೂ ಮಾರ್ಫಿಂಗ್ ಪೋಸ್ಟ್‌ಗಳನ್ನು ಹಾಕುತ್ತಿದ್ದ ಆರೋಪಿತೆ, ಅನುಪಮಾ ಸೇರಿದಂತೆ ಆಕೆಯ ಕುಟುಂಬ, ಸ್ನೇಹಿತರು ಮತ್ತು ಸಹ-ನಟರಿಗೆ ಟ್ಯಾಗ್ ಮಾಡುತ್ತಿದ್ದಳಂತೆ. ಹೀಗಾಗಿ ಆನ್‌ಲೈನ್‌ನಲ್ಲಿ ಇಂತಹ ಉದ್ದೇಶಿತ ಕಿರುಕುಳವನ್ನು ನೋಡುವುದು ತುಂಬಾ ದುಃಖಕರವಾಗಿದೆ ಎಂದಿದ್ದಾರೆ.
Comments are closed.