Kalburgi: ಹಗಲಲ್ಲಿ ಶಿಕ್ಷಕ, ರಾತ್ರಿ ಸಮಯ ಕಳ್ಳ: ಶಿಕ್ಷಕ ಅರೆಸ್ಟ್

Kalburgi: ಹಗಲು ಹೊತ್ತಿನಲ್ಲಿ ಶಿಕ್ಷಕ ವೃತ್ತಿ ಮಾಡುತ್ತಿದ್ದ ವ್ಯಕ್ತಿಯೊಬ್ಬ ರಾತ್ರಿ ಆಗುತ್ತಿದ್ದಂತೆ ಮನೆಗಳ್ಳತನ ಮಾಡಿ ಚಿನ್ನಾಭರಣ ಕಳವು ಮಾಡುತ್ತಿದ್ದ. ಈತನನ್ನು ಕಲಬುರಗಿ ಪೊಲೀಸರು ಬಂಧನ ಮಾಡಿದ್ದಾರೆ.

ಕಲಬುರಗಿಯ ಬಿಲಾಲ್ ಕಾಲೋನಿ ನಿವಾಸಿ ಮೊಹಮ್ಮದ್ ಆರಿಫ್ ಬಂಧಿತ ಶಿಕ್ಷಕ.
ಹಗಲು ಹೊತ್ತಿನಲ್ಲಿ ಮದರಸಾದಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಈತ ರಾತ್ರಿ ಹೊತ್ತಿನಲ್ಲಿ ಮನೆಗಳ್ಳತನ ಮಾಡುತ್ತಿದ್ದ. ಕಲಬುರಗಿಯ ಹಲವೆಡೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಕುರಿತು ದೂರು ದಾಖಲಾಗಿತ್ತು.
ಶಿಕ್ಷಕನನ್ನು ಬಂಧನ ಮಾಡಿರುವ ಪೊಲೀಸರು ಈತನಿಂದ 13 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
Comments are closed.