Ranya Rao: ರನ್ಯಾ ರಾವ್‌ ಕೇಸ್‌: 123 ಕೋಟಿ ಗೋಲ್ಡ್‌ ಸ್ಮಗ್ಲಿಂಗ್‌ ಸಾಬೀತು

ದೋಷಾರೋಪ ಪಟ್ಟಿ ಸಲ್ಲಿಕೆಗೆ ತಯಾರಿ

Share the Article

Ranya Rao: ನಟಿ ರನ್ಯಾ ರಾವ್‌ ಗೋಲ್ಡ್‌ ಸ್ಮಗ್ಲಿಂಗ್‌ ಪ್ರಕರಣ ಕೊನೆ ಹಂತ ತಲುಪಿದ್ದು, ಕಳೆದ 6 ತಿಂಗಳಿನಿಂದ ತನಿಖೆ ನಡೆಸುತ್ತಾ ಇದ್ದ ಡಿಆರ್‌ಐ ದೋಷಾರೋಪ ಪಟ್ಟಿ ಸಲ್ಲಿಕೆಗೆ ತಯಾರಿ ನಡೆಸಿದೆ. 123 ಕೋಟಿ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಿರುವುದು ಪ್ರಕರಣದ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಡಿಆರ್‌ಐ ಅಧಿಕಾರಿಗಳು ಈಗಾಗಲೇ ಐದು ಜನ ಆರೋಪಿಗಳಿಗೂ ಶೋಕಾಸ್‌ ನೋಟಿಸನ್ನು ನೀಡಿದ್ದಾರೆ. ಕೇವಲ ರನ್ಯಾ ರಾವ್‌ 102 ಕೋಟಿ ಮೌಲ್ಯದ ಚಿನ್ನವನ್ನು ಅಕ್ರಮ ಮಾಡಿದ್ದಾರೆ ಎನ್ನುವುದು ತನಿಖೆಯಲ್ಲಿ ಅನಾವರಣವಾಗಿದೆ ಎಂದಿದ್ದಾರೆ.

ಇನ್ನುಳಿದ ನಾಲ್ವರು ಆರೋಪಿಗಳಿಗೂ ಕೂಡಾ ಪ್ರತ್ಯೇಕ ಶೋಕಾಸ್‌ ನೋಟಿಸ್‌ ನೀಡಲಾಗಿತ್ತು. ಈಗ ಪ್ರಕರಣ ಕೊನೆಯ ಹಂತಕ್ಕೆ ತಲುಪಿದೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲು ತಯಾರಿ ನಡೆದಿದೆ.

Comments are closed.