Koppa: ದಟ್ಟ ಅರಣ್ಯದಲ್ಲಿ ಕಳೆದು ಹೋಗಿದ್ದ 75 ರ ವೈದ್ಯ; ಪೊಲೀಸ್‌ ಶ್ವಾನದಿಂದ ಪತ್ತೆ

Share the Article

Koppa: 75 ರ ಹರೆಯದ ವೃದ್ದರೊಬ್ಬರು ವಾಯುವಿಹಾರಕ್ಕೆಂದು ತೆರಳಿದ್ದು, ಕಾಡಿನಲ್ಲಿ ನಾಪತ್ತೆಯಾದ ಘಟನೆ ನಡೆದಿದೆ. ವೃದ್ಧರು  ವೈದ್ಯರಾಗಿದ್ದು, ಇವರು ದಾರಿ ತಪ್ಪಿ ನಾಲ್ಕು ದಿನಗಳ ಕಾಲ ಕಾಡಿನಲ್ಲಿಯೇ ಕಳೆದಿದ್ದು, ನಂತರ ಇವರನ್ನು ಪೊಲೀಸ್‌ ಇಲಾಖೆಯ ಶ್ವಾನ ದಳ ಪತ್ತೆ ಮಾಡಿದೆ. ಈ ಘಟನೆ ಕೊಪ್ಪ ತಾಲೂಕಿನ ಕಾಡಂಚಿನ ಗುಣವಂತೆ ಗ್ರಾಮದ ಬಳಿ ನಡೆದಿದೆ.

ನವೆಂಬರ್‌ 2 ರಂದು ವಾಯುವಿಹಾರಕ್ಕೆ ಬಂದಿದ್ದ ವೈದ್ಯ ವೆಂಕಟೇಗೌಡ (75) ದಾರಿ ತಪ್ಪಿ ಕಾಡು ಸೇರಿದ್ದರು. ಇವರಿಗೆ ವಯಸ್ಸಾಗಿರುವುದರಿಂದ ಮರೆವಿನ ಖಾಯಿಲೆ ಇದ್ದ ಕಾರಣ ವಾಪಸು ಬರಲು ಗೊತ್ತಾಗದ ಕಾರಣ ಅರಣ್ಯ ಪ್ರದೇಶದಲ್ಲಿ ಸುತ್ತಾಡಿದ್ದರು. ನಾಲ್ಕು ದಿನ ಹೀಗೆ ಸುತ್ತಾಡಿ ಕೊನೆಗೆ ಕಾಡಿನಲ್ಲೇ ಇದ್ದಿದ್ದರು

ನಂತರ ಕುಟುಂಬದವರು ಎಷ್ಟೇ ಹುಡುಕಿದರೂ ಅವರು ಸುಳಿವು ದೊರಕಿರಲಿಲ್ಲ. ನಂತರ ಪೊಲೀಸರಿಗೆ ದೂರನ್ನು ನೀಡಲಾಗಿತ್ತು. ಪೊಲೀಸರು ಹುಡುಕಾಟ ಪ್ರಾರಂಭ ಮಾಡಿದಾಗ ಗ್ರಾಮದ ಮನೆಯಲ್ಲಿ ನೀರು ಕುಡಿದು ಹೋಗಿದ್ದರು ಎಂದು ಗೊತ್ತಾಗಿದೆ. ನಂತರ ಕಾಡಂಚಲ್ಲಿ ಅವರ ಪಂಚೆ ಪತ್ತೆಯಾಗಿದೆ.

ಪೊಲೀಸ್‌ ಶ್ವಾನ ಪಂಚೆಯ ವಾಸನೆ ಹಿಡಿದಿದ್ದು, ಸುಮಾರು ಐದು ಕಿ.ಮೀ ದೂರದಲ್ಲಿ ವೃದ್ಧರನ್ನು ಪತ್ತೆ ಮಾಡಿದೆ. ಪೊಲೀಸರು ಇವರ ರಕ್ಷಣೆ ಮಾಡಿದ್ದಾರೆ, ಸುರಕ್ಷಿತರಾಗಿದ್ದಾರೆ.

Comments are closed.