Indira Kit: ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿ, ಇನ್ನು ಈ ವಸ್ತು ಹೆಚ್ಚವರಿಯಾಗಿ ಸಿಗಲಿದೆ

Share the Article

Indira Kit: ಅನ್ನಭಾಗ್ಯ ಯೋಜನೆ ಪಡಿತರ ಫಲಾನುಭವಿಗಳಿಗೆ ಇಂದಿರಾ ಕಿಟ್‌ನಲ್ಲಿ ಹೆಸರು ಕಾಳು ಬದಲು ಹೆಚ್ಚುವರಿಯಾಗಿ ತೊಗರಿಬೇಳೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ನಿರ್ಧಾರ ಮಾಡಿದೆ.

ಈ ಮೊದಲು ಇಂದಿರಾ ಕಿಟ್‌ನಲ್ಲಿ ಒಂದು ಕೆಜಿ ತೊಗರಿ ಬೇಳೆ, ಒಂದು ಕೆಜಿ ಹೆಸರು ಕಾಳು, ಒಂದು ಲೀಟರ್‌ ಅಡುಗೆ ಎಣ್ಣೆ, ಒಂದು ಕೆಜಿ ಸಕ್ಕರೆ, ಒಂದು ಕೆಜಿ ಉಪ್ಪು ನೀಡಲು ತೀರ್ಮಾನ ಮಾಡಿತ್ತು. ಈಗ ಹೆಸರು ಕಾಳು ಬದಲಿಗೆ ಅದೇ ಮೊತ್ತದಲ್ಲಿ ತೊಗರಿಬೇಳೆಯನ್ನು ಹೆಚ್ಚುವರಿಯಾಗಿ ನೀಡಲು ನಿರ್ಧಾರ ಮಾಡಲಾಗಿದೆ.

Comments are closed.