Bharat Taxi : ಈ ತಿಂಗಳಿಂದ ರಸ್ತೆಗಿಳಿಯಲಿವೆ ‘ಭಾರತ್‌ ಟ್ಯಾಕ್ಸಿ’- ಪ್ರಯಾಣಿಕರು, ಚಾಲಕರಿಗೆ ಏನೆಲ್ಲಾ ಲಾಭ?

Share the Article

Bharat Taxi: ಕೇಂದ್ರ ಸರಕಾರ (Central Government) ಇದೇ ಮೊದಲ ಬಾರಿಗೆ ಸಹಕಾರ ವಲಯದ ಕ್ಯಾಬ್‌ ಸೇವೆಯನ್ನು ಆರಂಭಿಸಲು ಮುಂದಾಗಿದ್ದು ಡಿಸೆಂಬರ್ ನಿಂದ ಇದು ಪ್ರಾರಂಭವಾಗುತ್ತದೆ ಎಂದು ತಿಳಿಸಿದೆ.

ಹೌದುಅತ್ಯಂತ ಪಾರದರ್ಶಕ ಮತ್ತು ಪಾರ್ಟಿಸಿಪೇಟಿವ್‌ ಮಾಡೆಲ್‌ನಲ್ಲಿ ಕೇಂದ್ರ ಸರ್ಕಾರವು ಭಾರತ್‌ ಟ್ಯಾಕ್ಸಿ (Bharat Taxi) ಯನ್ನು ಪ್ರಾರಂಭಿಸುತ್ತಿದೆ. ಕೇಂದ್ರ ಸಹಕಾರ ಸಚಿವಾಲಯ ಮತ್ತು ನ್ಯಾಶನಲ್‌ ಇ-ಗವರ್ನೆನ್ಸ್‌ ಡಿವಿಶನ್‌ ಈ ಯೋಜನೆಯನ್ನು ಅಭಿವೃದ್ಧಿಪಡಿಸುತ್ತಿದ್ದು, ಅಮಿತ ಶಾ ಅವರು ಕೇಂದ್ರ ಸಹಕಾರ ಸಚಿವರಾಗಿ ಇಲಾಖೆಯ ಸಾರಥ್ಯ ವಹಿಸಿದ್ದಾರೆ ಎನ್ನಲಾಗಿದೆ.

ಅಂದಹಾಗೆ ದಿಲ್ಲಿಯಲ್ಲಿ ಮೊದಲು ಆರಂಭವಾಗಲಿದ್ದು, ನಂತರ ದೇಶವ್ಯಾಪಿ ಅಸ್ತಿತ್ವಕ್ಕೆ ಬರಲಿದೆ. ಭಾರತ್‌ ಟ್ಯಾಕ್ಸಿ ಸೇವೆಯಿಂದ ಜನರಿಗೆ ಟ್ಯಾಕ್ಸಿ ಕ್ಯಾಬ್‌ ಸರ್ವೀಸ್‌ ದರದಲ್ಲಿ ಇಳಿಕೆಯಾಗಲಿದೆ. ದರಗಳು ಪಾರದರ್ಶಕವಾಗಿರುತ್ತದೆ. ಗ್ರಾಹಕರಿಗೆ ಪೀಕ್‌ ಅವರ್ಸ್‌ನಲ್ಲಿ ರೇಟ್‌ ಜಾಸ್ತಿ ಆಗಲ್ಲ. ಅಪಾಯದ ಸಮಯದಲ್ಲಿ ಸಮೀಪದ ಪೊಲೀಸ್‌ ಸ್ಟೇಶನ್‌ಗೆ ಅಲರ್ಟ್‌ ಮಾಡಬಹುದು. ಇಲ್ಲಿ ಚಾಲಕರೇ ಮಾಲೀಕರಾಗಿರುತ್ತಾರೆ. ಇದಕ್ಕಾಗಿ ಕೇಂದ್ರ ಸರಕಾರ 300 ಕೋಟಿ ರುಪಾಯಿಯ ಆರಂಭಿಕ ಬಂಡವಾಳ ನೀಡುತ್ತಿದೆ.

ಇನ್ನೂ ಇಲ್ಲಿ ಕ್ಯಾಬ್‌ ಚಾಲಕರು ಯಾವುದೇ ಅಗ್ರಿಗೇಟರ್ ಕಂಪನಿಗಳಿಗೆ‌ ಕೊಡುವಂತೆ 25-30% ಕಮಿಶನ್‌ ಕೊಡಬೇಕಿಲ್ಲ. 100 ಪರ್ಸೆಂಟ್‌ ಆದಾಯ ಚಾಲಕರಿಗೇ ಸಿಗಲಿದೆ. ಇಲ್ಲಿ ಚಾಲಕರಿಗೆ ಮೆಂಬರ್‌ ಶಿಪ್‌ ಮಾಡೆಲ್‌ ಇರುತ್ತದೆ. ಅವರು ಸಾಮಾನ್ಯ ಮಾಸಿಕ ಶುಲ್ಕವನ್ನು ಕೊಡಬಹುದು. ಹೀಗಾಗಿ ಚಾಲಕರು ಭಾರತ್‌ ಟ್ಯಾಕ್ಸಿಅಡಿಯಲ್ಲಿ ಹೆಚ್ಚು ಸಂಪಾದಿಸಬಹುದು ಎಂಬ ನಿರೀಕ್ಷೆ ಇದೆ. ಇಫ್ಕೊ, ನಬಾರ್ಡ್‌, ಅಮುಲ್‌, ಕೆಎಂಎಫ್‌ ಇರುವಂತೆ ಸಹಕಾರ ವಲಯದ ಕಂಪನಿ ಇದಾಗಲಿದೆ. ಈ ಕುರಿತ ಆಪ್‌ ಮೊದಲು ಹಿಂದಿಯಲ್ಲಿ ಬರಲಿದೆ. ಬಳಿಕ ಹಿಂದಿ-ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಸಿಗಲಿದೆ.

Comments are closed.