Mallamma: ಬಿಗ್ ಬಾಸ್ ನಿಂದ ಹೊರಬಂದ ಮಲ್ಲಮ್ಮನಿಗೆ ಸಿಕ್ಕ ಸಂಭಾವನೆ ಎಷ್ಟು?

Mallamma: ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ (Bigg Boss Kannada) ಪ್ರಮುಖ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ಮಲ್ಲಮ್ಮ ಕೇವಲ ಐದನೇ ವಾರಕ್ಕೆ ದೊಡ್ಮನೆಯಿಂದ ಹೊರಕ್ಕೆ ಹೋಗಬೇಕಾದ ಪರಿಸ್ಥಿತಿ ಬಂತು. ಬಿಗ್ ಬಾಸ್ ಮನೆಯಲ್ಲಿ ನೀಡಿದ ಸಂಭಾವನೆ ಬಗ್ಗೆ ಈಗ ಅವರು ಮಾತನಾಡಿದ್ದಾರೆ.

ಹೌದು, ಬಿಗ್ ಬಾಸ್ ಮನೆಯಲ್ಲಿರುವ ಪ್ರಸಿದ್ಧ ಕಲಾವಿದರು, ಘಟಾನುಘಟಿ ಸ್ಪರ್ಧಿಗಳಿಗೆ ಸಖತ್ ಪೈಪೋಟಿ ನೀಡಿದ್ದ ಮಲ್ಲಮ್ಮ ಈಗ ಮನೆಯಿಂದ ಹೊರ ಬಂದಿದ್ದಾರೆ. ಬಿಗ್ ಬಾಸ್ ಮನೆ ಸೇರುವ ಮೊದಲೇ, ನನಗೆ ಕಲರ್ಸ್ ಕನ್ನಡ ಸಂಬಳ ನೀಡುತ್ತೆ, ಅದಕ್ಕೆ ಬಿಗ್ ಬಾಸ್ ಮನೆಗೆ ಹೋಗ್ತಿದ್ದೇನೆ, ಬಂದ ಹಣದಲ್ಲಿ ಸಾಲ ತೀರಿಸ್ತೇನೆ ಎಂದಿದ್ದರು. ಈಗ 30 ದಿನಕ್ಕೂ ಹೆಚ್ಚು ಕಾಲ ಬಿಗ್ ಬಾಸ್ ಮನೆಯಲ್ಲಿದ್ದು ಬಂದ ಮಲ್ಲಮ್ಮನಿಗೆ 1.50 ಲಕ್ಷ ರೂಪಾಯಿ ಸಿಕ್ಕಿದೆ. ಇದನ್ನು ಸ್ವತಃ ಮಲ್ಲಮ್ಮ ಹೇಳಿದ್ದಾರೆ.
ಟೈಲರಿಂಗ್ ಕಲಿತಿರುವ ಮಲ್ಲಮ್ಮ, ದೊಡ್ಡ ಮಗನ ಮದುವೆ, ಮನೆ ಕಟ್ಟಿದ್ದರ ಸಾಲ ತೀರಿಸಲು ಬೆಂಗಳೂರಿಗೆ ಬಂದಿದ್ದರು. 15 ವರ್ಷಗಳಿಂದ ಮಲ್ಲಮ್ಮ ಬೆಂಗಳೂರಿನಲ್ಲಿದ್ದಾರೆ. ಪಲ್ಲವಿಯವರ ಬೋಟಿಕ್ ನಲ್ಲಿ ಕೆಲ್ಸ ಮಾಡ್ತಿರುವ ಮಲ್ಲಮ್ಮ, ಚಿಕ್ಕ ಮಗನಿಗೆ ಮದುವೆ ಮಾಡಿದ್ದಾರೆ. ಚಿಕ್ಕ ಮಗನ ಮದುವೆಗೆ ಮಲ್ಲಮ್ಮ ಸಾಲ ಮಾಡಿದ್ದರು. ಈಗ ಸುಮಾರು 7 ಲಕ್ಷ ಸಾಲ ಮೈಮೇಲಿದೆ. ಬಿಗ್ ಬಾಸ್ ಮನೆಯಲ್ಲಿ ಸಿಕ್ಕ ಹಣದಲ್ಲಿ ಸಾಲ ತೀರಿಸ್ತೇನೆ ಅಂತ ಮಲ್ಲಮ್ಮ ಹೇಳಿದ್ದಾರೆ.
Comments are closed.