Bengaluru : ಜನರೇ ಎಚ್ಚರ.. ಆಹ್ವಾನ ಪತ್ರಿಕೆ ಕೊಡೋ ನೆಪದಲ್ಲಿ ಬಂದು 200 ಗ್ರಾಂ ಚಿನ್ನ ಎಗರಿಸಿದ ಕಳ್ಳರು!!

Share the Article

Bengaluru : ಚಡ್ಡಿ ಗ್ಯಾಂಗ್, ಮುಸುಕು ಗ್ಯಾಂಗ್, ಲುಂಗಿ ಗ್ಯಾಂಗ್ ಸೇರಿದಂತೆ ಇತ್ಯಾದಿ ಕಳ್ಳ ಕಾಕರ ಗ್ಯಾಂಗಗಳು ಹುಟ್ಟಿಕೊಂಡಿವೆ. ಇದೀಗ ಅಚ್ಚರಿ ಎಂಬಂತೆ ಆಹ್ವಾನ ಪತ್ರಿಕೆ ನೀಡುವಾಗ ಕಳ್ಳರ ಗ್ಯಾಂಗ್ ಒಂದು ದೃಷ್ಟಿಯಾಗಿದೆ. ಅಷ್ಟೇ ಅಲ್ಲ ಪತ್ರಿಕೆ ನೀಡುವ ನೆಪದಲ್ಲಿ ಮನೆ ಒಂದಕ್ಕೆ ತೆರಳಿ ಬರುವ 200 ಗ್ರಾಂ ಚಿನ್ನವನ್ನು ಕೂಡ ಎಗಾರಿಸಿದ್ದಾರೆ.

ಹೌದು ಜನರೇ.. ಪರಿಚಯ ಇಲ್ಲದವರು ಮದುವೆ ಆಮಂತ್ರಣ ಪತ್ರಿಕೆ ಕೊಡಲು ಬಂದರೆ ಎಚ್ಚರ..!! ಯಾಕೆಂದರೆ ತಾಲ್ಲೂಕಿನ ಅತ್ತಿಬೆಲೆ ಪೊಲೀಸ್‌ ಠಾಣೆಯ ವ್ಯಾಪ್ತಿಯ ನೆರಳೂರು ಗ್ರಾಮದಲ್ಲಿ ಬುಧವಾರ ಹಾಡು ಹಗಲೇ ಪರಿಚಯವೇ ಇಲ್ಲದವರು ಮನೆಗೆ ಆಹ್ವಾನ ಪತ್ರಿಕೆ ನೀಡುವ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಮನೆ ಮಾಲೀಕರ ಕೈ ಕಾಲು ಕಟ್ಟಿಹಾಕಿ ಮನೆಯಲ್ಲಿದ್ದ 200 ಗ್ರಾಂ ಚಿನ್ನಾಭರಣ ದೋಚಿದ್ದಾರೆ.

ನೆರಳೂರು ನಿವಾಸಿ ರವಿಕುಮಾರ್, ನಾಗವೇಣಿ ದಂಪತಿ ಮನೆಯಲ್ಲಿ ಕಳ್ಳರು ಹೊಸ ತಂತ್ರದ ಮೂಲಕ ದರೋಡೆ ಮಾಡಿದ್ದಾರೆ. ಒಬ್ಬಂಟಿ ಮಹಿಳೆಯರು, ಮನೆಯಲ್ಲಿ ಪತಿ ಕೆಲಸಕ್ಕೆ ಹೋಗಿರುವ ವೇಳೆ, ಮನೆಯಲ್ಲಿ ಮಹಿಳೆಯರೇ ಇರುವಾಗ ಈ ಗ್ಯಾಂಗ್ ಮದುವೆ ಆಮಂತ್ರಣ ಪತ್ರಿಕೆ ಹಿಡಿದು ಪ್ರತ್ಯಕ್ಷವಾಗುತ್ತೆ. ಹೀಗೆ ರವಿಕುಮಾರ್ ಕೆಲಸಕ್ಕೆ ಹೋಗಿದ್ದ ವೇಳೆ ಮದುವೆ ಆಮಂತ್ರಣ ಕೊಟ್ಟು ನಾಗವೇಣಿಯನ್ನು ಕಟ್ಟಿ ಹಾಕಿದ್ದಾರೆ. ಬಳಿಕ ಚಾಕು ಕತ್ತಿಗೆ ಇಟ್ಟು ಬೀರು, ಲಾಕರ್ ಕೀ ನೀಡಲು ಸೂಚಿಸಿದ್ದಾರೆ. ಕೀ ಪಡೆದು200 ಗ್ರಾಂ ಚಿನ್ನಾಭರಣ, ನಗದು ಹಣ ದೋಚಿದ್ದಾರೆ.ಬಳಿಕ ನಾಗವೇಣಿಯನ್ನು ರೂಮಿನಲ್ಲಿ ಕೂಡಿಟ್ಟು, ಹೊರಗಿನಿಂದ ಬಾಗಿಲು ಹಾಕಿ ಗ್ಯಾಂಗ್ ಪರಾರಿಯಾಗಿದೆ.

ನಾಗವೇಣಿ ಹೇಗೋ ಅಲ್ಲಿಂದ ಬಿಡಿಸಿಕೊಂಡು ತಮ್ಮ ಫೋನ್ ಮೂಲಕ ಸ್ನೇಹಿತೆಗೆ ಕರೆ ಮಾಡಿ ನಡೆದ ವಿಚಾರವನ್ನು ತಿಳಿದ್ದಾರೆ. ತಕ್ಷಣ ಅಕ್ಕ ಪಕ್ಕದ ಸ್ನೇಹಿತರು ಓಡೋಡಿ ಬಂದು ನೋಡಿದಾಗ ನಾಗವೇಣಿ ಮನೆಯೊಳಗೆ ಲಾಕ್ ಆಗಿರುವುದು ಗೊತ್ತಾಗಿದೆ. ನಂತರ ಅವರನ್ನು ಅಲ್ಲಿಂದ ಬಿಡಿಸಿದ್ದಾರೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್‌ಪಿ ವೆಂಕಟೇಶ್ ಪ್ರಸನ್ನ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Comments are closed.