Chikkamagaluru: ದೈವದಂತೆ ವರ್ತಿಸಿ, ಸರ್ವೆಗೆ ಬಂದವರ ಮೇಲೆ ಹಲ್ಲೆ

Share the Article

Chikamagaluru: ಕೊಪ್ಪ (Koppa) ತಾಲೂಕಿನ ಚಿಕ್ಕನಗುಂಡಿಯಲ್ಲಿ ಜಾಗದ ಸರ್ವೆ ಮಾಡುವಾಗ ವ್ಯಕ್ತಿಯೊಬ್ಬ ದೈವ ಬಂದಂತೆ ಕೈಯಲ್ಲಿ ಬೆಂಕಿ ಹಿಡಿದು ಬಂದು ಸರ್ವೇಗೆ ಹೋದವರ ಮೇಲೆ ಹಲ್ಲೆ ನಡೆಸಿರುವುದು ನಡೆದಿದೆ.

ಗ್ರಾಮದ ಸುರೇಶ್ ಹಾಗೂ ಅವರ ಅಣ್ಣ-ತಮ್ಮಂದಿರ ನಡುವೆ ಜಾಗದ ವ್ಯಾಜ್ಯ ಇತ್ತು. ಇದಕ್ಕಾಗಿ ಅಧಿಕಾರಿಗಳು ಸರ್ವೆಗೆ ಬಂದಿದ್ದರು. ಈ ವೇಳೆ ಸುರೇಶ್ ಏಕಾಏಕಿ ಬೆಂಕಿ ಹಿಡಿದು ಬಂದಿದ್ದಾನೆ. ಇದರಿಂದ ಅಧಿಕಾರಿಗಳು ಶಾಕ್ ಆಗಿದ್ದಾರೆ.

ತಮ್ಮನ ಹೆಂಡತಿ ರಮ್ಯಾ ಅವರ ಮೇಲೆ ಈ ವೇಳೆ ಸುರೇಶ್ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಕೊಪ್ಪ ಪೊಲೀಸ್ (Police) ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.

 

Comments are closed.