Tooth Paste : ಟೂತ್ ಪೇಸ್ಟ್ ಕೆಳಗೆ ಇರುವ ಬಣ್ಣಗಳ ಅರ್ಥವೇನೆಂದು ಗೊತ್ತೇ? 99% ಜನರಿಗೆ ಇದು ತಿಳಿದೇ ಇಲ್ಲ

Share the Article

Tooth Paste : ನಾವು ದಿನನಿತ್ಯವೂ ಬಳಸುವ ಕೆಲವು ವಸ್ತುಗಳ ಬಗ್ಗೆ ಇರುವ ಇಂಟರೆಸ್ಟಿಂಗ್ ವಿಚಾರಗಳನ್ನು ನಾವು ತಿಳಿಯದೆ ಹೋಗಿರುತ್ತೇವೆ. ಆದರೆ ಇವುಗಳ ಕುರಿತು ತಿಳಿದಾಗ ನಿಜಕ್ಕೂ ಅಚ್ಚರಿ ಉಂಟಾಗುತ್ತದೆ. ಅಂತಗೆ ಪ್ರತಿದಿನವೂ ನಾವು ಎದ್ದ ತಕ್ಷಣ ಬಳಸುವ ಟೂಥ್ ಪೇಸ್ಟ್ ಟ್ಯೂಬ್ ಗಳ ಕೆಳಗೆ ಇರುವ ಬಣ್ಣಗಳ ಬಗ್ಗೆ ನಿಮಗೆ ಗೊತ್ತಿದೆಯೇ? ಅಲ್ಲಿ ಕೊಟ್ಟಿರುವ ಬಣ್ಣಗಳ ಅರ್ಥವೇನು ಗೊತ್ತಾ? ಇಲ್ಲಿದೆ ನೋಡಿ ಡೀಟೇಲ್ಸ್

ಟೂಥ್ ಪೇಸ್ಟ್ ಟ್ಯೂಬ್ ನ ಕೆಳಭಾಗದಲ್ಲಿ ಇರುವಂತಹ ಬಣ್ಣವು ಅದಕ್ಕೆ ಸೇರಿಸಿರುವ ಪದಾರ್ಥ ಮತ್ತು ಗುಣಮಟ್ಟವನ್ನು ಸೂಚಿಸುತ್ತದೆ ಎಂದು ನಂಬಲಾಗಿದೆ. ಆದರೆ ಇದು ದೊಡ್ಡ ಮಿಥ್ಯ ಎಂದು ಗುರ್ಗಾಂವ್ ಪರಾಸ್ ಅಸ್ಪತ್ರೆಯ ಡಾ. ಸಗೀರ ಅಜಾಜ್ ಅವರು ಹೇಳಿದ್ದಾರೆ. ಈ ಬಣ್ಣಗಳನ್ನು ಐ ಮಾರ್ಕ್ ಅಥವಾ ಕಲರ್ ಮಾರ್ಕ್ ಎಂದು ಕರೆಯಲಾಗುತ್ತದೆ.

ಟೂತ್‌ಪೇಸ್ಟ್ ಟ್ಯೂಬ್‌ನಲ್ಲಿ ಹಸಿರು ಬಣ್ಣದ ಗುರುತು ಇದ್ದರೆ, ಅದು ನೈಸರ್ಗಿಕ ಪದಾರ್ಥಗಳಿಂದ ಮಾತ್ರ ತಯಾರಿಸಲ್ಪಟ್ಟಿದೆ ಎಂದು ಅರ್ಥ. ನೀವು ರಾಸಾಯನಿಕ ವಸ್ತುಗಳನ್ನು ಇಷ್ಟಪಡದಿದ್ದರೆ, ಕೇವಲ ನೈಸರ್ಗಿಕವಾದ ಪೇಸ್ಟ್​ ಬೇಕಾದರೆ ಈ ರೀತಿಯ ಟೂತ್​ಪೇಸ್ಟ್ ಅನ್ನು ಬಳಸುವುದು ಉತ್ತಮ ಆಯ್ಕೆಯಾಗಿದೆ.

ಕೆಂಪು ಬಣ್ಣದ ಬ್ಲಾಕ್ ಎಂದರೆ ನೈಸರ್ಗಿಕ ಮತ್ತು ರಾಸಾಯನಿಕ ವಸ್ತುಗಳು ಎರಡನ್ನೂ ಬೆರೆಸಿ ಈ ಟೂತ್ ಪೇಸ್ಟ್ ತಯಾರಿಸಲಾಗಿದೆ ಎಂದು ಅರ್ಥ. ನೀವು ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಟೂತ್​ಪೇಸ್ಟ್ ಮಾತ್ರ ಬಳಸಲು ಬಯಸಿದರೆ, ಕೆಂಪು ಬಣ್ಣದ ಮಾರ್ಕ್ ಇರುವ ಪೇಸ್ಟ್ ನಿಮಗಾಗಿ ಅಲ್ಲ.

ಕೆಳಭಾಗ ನೀಲಿ ಬಣ್ಣದಲ್ಲಿದ್ದರೆ, ಅದು ನೈಸರ್ಗಿಕ ಮತ್ತು ಔಷಧೀಯ ಪದಾರ್ಥಗಳಿಂದ ತಯಾರಿಸಲ್ಪಟ್ಟಿದೆ ಎಂದರ್ಥ. ನಿರ್ದಿಷ್ಟ ಪರಿಸ್ಥಿತಿಯಲ್ಲಿ ಈ ರೀತಿಯ ಪೇಸ್ಟ್ ಅನ್ನು ಬಳಸಲು ವೈದ್ಯರು ಶಿಫಾರಸು ಮಾಡುತ್ತಾರೆ. ಆದ್ದರಿಂದ, ಅದನ್ನು ಬಳಸುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ.

ಇನ್ನು ಕಪ್ಪು ಗುರುತು ಇದೆ ಎಂದರೆ ಈ ಟೂತ್​ಪೇಸ್ಟ್ ಅನ್ನು ರಾಸಾಯನಿಕಗಳಿಂದ ಮಾತ್ರ ತಯಾರಿಸಲಾಗುತ್ತದೆ. ಆದ್ದರಿಂದ, ನಿಮ್ಮ ಅನುಕೂಲಕ್ಕೆ ಅನುಗುಣವಾಗಿ, ವಿವಿಧ ಬಣ್ಣದ ಗುರುತು ಇರುವ ಪೇಸ್ಟ್‌ಗಳಿಂದ ನಿಮ್ಮ ಆಯ್ಕೆಯನ್ನು ನೀವು ಮಾಡಬಹುದು.

Comments are closed.