Baglauru: ನಾಯಿಯನ್ನು ಎತ್ತಿ ನೆಲಕ್ಕೆ ಬಡಿದು ಕೊಂದ ಆರೋಪಿ ಮಹಿಳೆ ಅರೆಸ್ಟ್‌

Share the Article

Bagalur: ಬಾಗಲೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಾಯಿಮರಿಯನ್ನು ನೆಲಕ್ಕೆ ಬಡಿದು ಕೊಲೆ ಮಾಡಿದ್ದ ಕೆಲಸದಾಕೆಯನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಪುಷ್ಪಲತಾ ಬಂಧಿತ ಮನೆಕೆಲಸದಾಕೆ. ರಾಶಿಕಾ ಎಂಬುವವರು ತಮ್ಮ ಗೂಸಿ ಹೆಸರಿನ ನಾಯಿಯನ್ನು ನೋಡಿಕೊಳ್ಳಲು ಪುಷ್ಪಲತಾಳನ್ನು ಮನೆ ಕೆಲಸದಾಕೆಯಾಗಿ ನೇಮಿಸಿಕೊಂಡಿದ್ದರು. ಇದಕ್ಕಾಗಿ ಪುಷ್ಪಲತಾಳಿಗೆ ಮಾಸಿಕ ರೂ.23000 ಸಂಬಳವನ್ನೂ ನೀಡುತ್ತಿದ್ದರು.

ಲಿಫ್ಟ್‌ನಲ್ಲಿ ನಾಯಿಯನ್ನು ಮೇಲಕ್ಕೆ ಎತ್ತಿ ನೆಲಕ್ಕೆ ಬಡಿದು ಉಸಿರುಗಟ್ಟಿಸಿ ಸಾಯಿಸಿದ್ದಾಳೆ ಎಂದು ತಿಳಿದು ಬಂದಿದೆ. ಈ ಕೃತ್ಯದ ನಂತರ ಆಕೆ ನಾಯಿ ಸತ್ತು ಹೋಗಿದೆ ಎಂದು ಮಾಲೀಕರಿಗೆ ಸುಳ್ಳು ಕಥೆ ಹೇಳಿದ್ದಾಳೆ. ಆದರೆ ನಾಯಿಯ ಮಾಲೀಕರಿಗೆ ಅನುಮಾನ ಉಂಟಾಗಿದ್ದು, ಕಟ್ಟಡದ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಮಾಡಿದಾಗ ಪುಷ್ಪಲತಾಳ ಕ್ರೂ ಕೃತ್ಯ ಬೆಳಕಿಗೆ ಬಂದಿದೆ.

ದೃಶ್ಯಗಳನ್ನು ನಾಯಿಯನ್ನು ಕೊಲೆ ಮಾಡುವ ಚಿತ್ರಣ ಕಂಡು ಬಂದಿದ್ದು, ಬಾಗಲೂರು ಪೊಲೀಸ್‌ ಠಾಣೆಗೆ ಕೂಡಲೇ ರಾಶಿಕಾ ದೂರನ್ನು ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧನ ಮಾಡಿ ವಿಚಾರಣೆ ನಡೆಸಿದ್ದಾರೆ.

ನಾಯಿಯನ್ನು ಎಷ್ಟೇ ಎಳೆದರೂ ಲಿಫ್ಟ್‌ ಒಳಗೆ ಬರಲಿಲ್ಲ. ಹೀಗಾಗಿ ಕೋಪಗೊಂಡು ನೆಲಕ್ಕೆ ಬಡಿದಿದ್ದಾಗಿ ಆರೋಪಿತೆ ಪುಷ್ಪಲತಾ ಹೇಳಿದ್ದಾಳೆ.

Comments are closed.