Jai Hanuman: ರಿಷಬ್ ಶೆಟ್ಟಿಯ ತೆಲುಗು ಚಿತ್ರಕ್ಕೆ ಭಾರೀ ಸಂಕಷ್ಟ – ನಿರ್ದೇಶಕರ ವಿರುದ್ಧವೇ ದೂರು ದಾಖಲು

Jai Hanuman : ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಭಾರಿ ದೊಡ್ಡ ಯಶಸ್ಸು ಗಳಿಸಿದೆ. ಸಿನಿಮಾ 1000 ಕೋಟಿಯ ಗಡಿಯಲ್ಲಿದೆ. ಇನ್ನು ಈ ಚಿತ್ರದ ಚಿತ್ರೀಕರಣದ ಹಂತದಲ್ಲಿಯೇ ರಿಷಬ್ ಶೆಟ್ಟಿ ತೆಲುಗು ಸಿನಿಮಾನಲ್ಲಿ ನಟಿಸುತ್ತಿರುವುದಾಗಿ ಘೋಷಿಸಿದ್ದು, ಸಿನಿಮಾದ ಪೋಸ್ಟರ್ ಸಹ ಬಿಡುಗಡೆ ಆಗಿತ್ತು. ಆದರೆ ಇದೀಗ ಆ ಸಿನಿಮಾ ಸಂಕಷ್ಟಕ್ಕೆ ಸಿಲುಕಿದೆ. ಸಿನಿಮಾ ನಿರ್ದೇಶಕರ ವಿರುದ್ಧ ದೂರು ದಾಖಲಾಗಿದೆ.

ರಿಷಬ್ ಶೆಟ್ಟಿ ಇದೀಗ ತೆಲುಗು ಚಿತ್ರರಂಗದಲ್ಲಿಯೂ ಪಾದಾರ್ಪಣೆ ಮಾಡಲು ಸಜ್ಜಾಗಿದ್ದರು. ಪ್ರಶಾಂತ್ ವರ್ಮಾ ನಿರ್ದೇಶನದ ‘ಜೈ ಹನುಮಾನ್’ ಎಂಬ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಅವರು ನಾಯಕನಾಗಿ ನಟಿಸುತ್ತಿದ್ದಾರೆ. ಆದರೆ ಈ ಚಿತ್ರ ಈಗ ನಿರೀಕ್ಷೆಗೂ ಮೀರಿದ ಸಂಕಷ್ಟವನ್ನು ಎದುರಿಸುತ್ತಿದೆ. ಸಿನಿಮಾದ ನಿರ್ದೇಶಕ ಪ್ರಶಾಂತ್ ವರ್ಮಾ ವಿರುದ್ಧ ವಂಚನೆ ಹಾಗೂ ಮೋಸದ ಆರೋಪದ ಮೇಲೆ ನಿರ್ಮಾಪಕರ ಸಂಘ ಹಾಗೂ ಫಿಲಂ ಚೇಂಬರ್‌ನಲ್ಲಿ ಅಧಿಕೃತ ದೂರು ದಾಖಲಾಗಿದೆ.
ಹನು-ಮ್ಯಾನ್’ ಸಿನಿಮಾ ಬಳಿಕ ಪ್ರಶಾಂತ್ ವರ್ಮಾಗೆ ನಿರ್ಮಾಪಕ ನಿರಂಜನ್ ರೆಡ್ಡಿ 10 ಕೋಟಿ ಹಣ ನೀಡಿದ್ದರು ಎನ್ನಲಾಗಿದೆ. ಇದಕ್ಕಾಗಿ ಪ್ರಶಾಂತ್ ವರ್ಮಾ, ಐದು ಸಿನಿಮಾಗಳನ್ನು ನಿರ್ದೇಶನ ಮಾಡುವುದಾಗಿ ಹಣ ಪಡೆದುಕೊಂಡಿದ್ದರು. ಆದರೆ ಈಗ ಸಿನಿಮಾ ನಿರ್ದೇಶನ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಈ ‘ಜೈ ಹನುಮಾನ್’ ಸಿನಿಮಾವನ್ನು ನಿರಂಜನ್ ರೆಡ್ಡಿ ನಿರ್ಮಾಣದಲ್ಲಿ ಮಾಡುವುದಾಗಿ ಪ್ರಶಾಂತ್ ವರ್ಮಾ ಹೇಳಿದ್ದರಂತೆ. ಆದರೆ ಹಣ ಪಡೆದು ಮಾತಿಗೆ ತಪ್ಪಿದ್ದಾರೆ.ಹೀಗಾಗಿ ನಿರ್ಮಾಪಕರು ಫಿಲಂ ಚೇಂಬರ್ ಮೆಟ್ಟಿಲೇರಿದ್ದು, ಈ ಪ್ರಕರಣ ಈಗ ಫಿಲಂ ಚೇಂಬರ್ನಲ್ಲಿದ್ದು ನಿರ್ದೇಶಕ ಪ್ರಶಾಂತ್ ವರ್ಮಾ ಅನ್ನು ಕರೆಸಿ ಮಾತುಕತೆಗೆ ಮುಂದಾಗಿದೆ.
Comments are closed.