LPG ಸಿಲಿಂಡರ್ ದರ ಇಳಿಕೆ !!

Share the Article

LPG: ನವೆಂಬರ್ ಮೊದಲ ದಿನವೇ ದೇಶದ ಜನತೆಗೆ ಸಿಹಿ ಸುದ್ದಿ ಸಿಕ್ಕಿದ್ದು, ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆಯಲ್ಲಿ(LPG Gas Price) ಇಳಿಕೆ ಕಂಡು ಬಂದಿದೆ.

ಹೌದು, ತೈಲ ಮಾರುಕಟ್ಟೆ ಕಂಪನಿಗಳ ಅಧಿಸೂಚನೆಯ ಪ್ರಕಾರ, 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು 4.5 ರಿಂದ ರೂ. 6.5 ವರೆಗೆ ಇಳಿಸಲಾಗಿದೆ. ಇನ್ನು ಗೃಹ ಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಈ ತಿಂಗಳು ಯಾವುದೇ ಬದಲಾವಣೆ ಆಗಿಲ್ಲ. ಈ ಬೆಲೆಗಳು ಏಪ್ರಿಲ್ 2025 ರಿಂದ ಸ್ಥಿರವಾಗಿಯೇ ಇವೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ ನೀಡಿರುವ ಮಾಹಿತಿಯ ಪ್ರಕಾರ, ದೆಹಲಿಯಲ್ಲಿ 19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಬೆಲೆ ಈಗ ರೂ. 1590.50 ಆಗಿದೆ. ಈ ಹಿಂದೆ ಅದು ರೂ. 1595.50 ಇತ್ತು. ಅಂದರೆ, ಪ್ರತಿ ಸಿಲಿಂಡರ್‌ಗೂ 5 ರೂಪಾಯಿಯಷ್ಟು ಇಳಿಕೆ. ಇದೇ ರೀತಿಯಾಗಿ ಕೋಲ್ಕತ್ತಾದಲ್ಲಿ ಹೊಸ ದರ ರೂ. 1694, ಮುಂಬೈನಲ್ಲಿ ರೂ. 1542 ಮತ್ತು ಚೆನ್ನೈನಲ್ಲಿ ರೂ. 1750 ಆಗಿದೆ. ಆದರೆ, ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಹಳೆಯ ದರಗಳೇ ಮುಂದುವರಿಯಲಿವೆ ಎಂದು ತೈಲ ಕಂಪನಿಗಳು ಸ್ಪಷ್ಟಪಡಿಸಿವೆ.

Comments are closed.