Kannada Rajyotsava: ಸಿ.ಎನ್. ಸಿ ಸಂಘಟನೆಯಿಂದ ದೆಹಲಿಯಲ್ಲಿ ನವೆಂಬರ್ 1 ಕರಾಳ ದಿನ ಆಚರಣೆ

Kannada Rajyotsava: ಸಿ ಎನ್ ಸಿ ಸಂಘಟನೆಯ ವತಿಯಿಂದ ಇಂದು ದೆಹಲಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಕರಾಳ ದಿನವನ್ನಾಗಿ ಆಚರಿಸಿಕೊಂಡಿದ್ದಾರೆ.

1956ರ ನವೆಂಬರ್ 1 ರಂದು ಬಲವಂತವಾಗಿ ಪ್ರತ್ಯೇಕ ರಾಜ್ಯವಾಗಿದ್ದ ಕೊಡಗನ್ನು ಮೈಸೂರು ರಾಜ್ಯಕ್ಕೆ ಸೇರಿಸಿದನ್ನು ಆಕ್ಷೇಪಿಸಿ, ಹಾಗೆ ಪ್ರತ್ಯೇಕ ಕೊಡವ ಲ್ಯಾಂಡ್ ಒತ್ತಾಯಕ್ಕಾಗಿ ಪ್ರತಿಭಟನೆಯನ್ನು ನಡೆಸಲಾಗಿದೆ ಎಂದು ಸಿ ಎನ್ ಸಿ ಸಂಘಟನೆಯ ಎನ್ ಯು.ನಾಚಪ್ಪ ಕೊಡವ ದೆಹಲಿಯಲ್ಲಿ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಸರ್ದಾರ್ ವಲ್ಲಬಾಯ್ ಪಟೇಲ್ ರವರು ಲೋಕಸಭಾ ಅಧಿವೇಶನದಲ್ಲಿ, ಸುಂದರ, ಶಾಂತಿಯುತ ಜಿಲ್ಲೆ ಇದ್ದರೆ ಅದು ದಕ್ಷಿಣ ಭಾರತದ ಕೊಡಗು ಎಂದಿದ್ದಾರೆ. ಈ ಜಿಲ್ಲೆ ರಾಮರಾಜ್ಯ ಜಿಲ್ಲೆ ಎಂದು ಅಂದು ಅವರು ತಿಳಿಸಿದ್ದರು. ಅಂತಹ ಪ್ರತ್ಯೇಕ ರಾಜ್ಯವಾಗಿದ್ದ ಕೊಡಗನ್ನು ಕರ್ನಾಟಕಕ್ಕೆ ಸೇರಿಸಿ ಇಂದು ಅಭಿವೃದ್ಧಿ ಶೂನ್ಯವಾಗಿದೆ. ಆರ್ಟಿಕಲ್ 370 ವಿಧಿ ಅನ್ವಯ ಪ್ರತ್ಯೇಕ ಕೊಡವ ಲ್ಯಾಂಡ್ ಗಾಗಿ ನಾವು ಶಾಂತಿಯುತವಾಗಿ ಕಳೆದ ಹಲವು ದಶಕಗಳಿಂದ ಹೋರಾಟ ನಡೆಸುತ್ತಾ ಬರುತ್ತಿದ್ದೇವೆ ಎಂದು ಹೇಳಿದರು. ನಮ್ಮ ಬೇಡಿಕೆ ಈಡೇರಿರುವವರಿಗೆ ಈ ಹೋರಾಟವನ್ನು ನಡೆಸ್ತೇವೆ ಎಂದು ಈ ಸಂದರ್ಭ ಅವರು ಸ್ಪಷ್ಟಪಡಿಸಿದರು.
Comments are closed.