Bantwala: ಆಂಬುಲೆನ್ಸ್ ತಡೆದ ಬೈಕ್ ಸವಾರನಿಗೆ ಕೋರ್ಟ್ ನೀಡಿದ ಶಿಕ್ಷೆ ಏನು?

Bantwala: ಬಿಸ್ಲೆ ಘಾಟ್ನಲ್ಲಿ ಅಪಘಾತದಲ್ಲಿ ಗಾಯಗೊಂಡವರನ್ನು ಆಂಬುಲೆನ್ಸ್ನಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಆಂಬುಲೆನ್ಸ್ಗೆ ದಾರಿ ಬಿಡದ ಬೈಕ್ ಸವಾರನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಗೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಘಟನೆಗೆ ಸಂಬಂಧಪಟ್ಟಂತೆ ಕೋರ್ಟ್ ವ್ಯಕ್ತಿಗೆ ಗಂಭೀರ ಎಚ್ಚರಿಕೆಯನ್ನು ನೀಡಿದೆ.

ವನಗೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೊರಟಿದ್ದ ಮದುವೆ ದಿಬ್ಬಣದ ಮ್ಯಾಕ್ಸಿಕ್ಯಾಬ್ ಹಾಸನ ಜಿಲ್ಲೆ ಸಕಲೇಶಪುತ ತಾಲೂಕಿನ ಬಿಸ್ಲೆ ಘಾಟ್ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಪರಿಣಾಮ 20 ಮಂದಿ ಗಾಯಗೊಂಡಿದ್ದರು. ಈ ಸಂದರ್ಭದಲ್ಲಿ ಗಾಯಗೊಂಡವರನ್ನು ತುರ್ತಾಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ವೇಳೆ ಬಿ.ಸಿ.ರೋಡ್ ಬಳಿ ಆಂಬುಲೆನ್ಸ್ಗೆ ದಾರಿ ಬಿಡದೆ ಪುತ್ತೂರಿನ ಬೆಟ್ಟಂಪಾಡಿ ಗ್ರಾಮದ ಮಹಮ್ಮದ್ ಮನ್ಸೂರು ಎಂಬ ಬೈಕ್ ಸವಾರ ಅಡ್ಡಗಟ್ಟಿ ಸುಮಾರು 3-4 ಕಿ.ಮೀಗಳಷ್ಟು ಹಠದಿಂದ ಹಿಂಬಾಲಿಸಿ ಸಮಸ್ಯೆ ಉಂಟು ಮಾಡಿದ್ದ. ಇದನ್ನು ಆಂಬುಲೆನ್ಸ್ ಸಿಬ್ಬಂದಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು.
ವಿಡಿಯೋ ಆಧರಿಸಿ ಬಂಟ್ವಾಳ ನಗರ ಪೊಲೀಸರು ಮನ್ಸೂರನ್ನು ವಶಕ್ಕೆ ಪಡೆದು, ನ್ಯಾಯಾಲಾಯಕ್ಕೆ ಹಾಜರುಪಡಿಸಿದ್ದು, ತುರ್ತು ಸೇವೆಗೆ ಅಡ್ಡಿ ಮಾಡಿರುವ ಕಾರಣ, ಬಂಟ್ವಾಳ JMFC ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
Comments are closed.