Driverless Car in Bengaluru: ಬೆಂಗಳೂರಿಗೆ ಕಾಲಿಟ್ಟ ಚಾಲಕ ರಹಿತ ಕಾರು!

Share the Article

 

Driverless Car in Bengaluru: ಆಧುನಿಕತೆಯಲ್ಲಿ ಬೆಂಗಳೂರು ಒಂದು ಹೆಜ್ಜೆ ಮುಂದಿದೆ. ಅಂತೆಯೇ ಚಾಲಕ ರಹಿತ ಕಾರೊಂದು( Driverless Car in Bengaluru)ಬೆಂಗಳೂರಿನಲ್ಲಿ ಅನಾವರಣಗೊಂಡಿದೆ. ಹೌದು, ವಿಪ್ರೋ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISC) ಮತ್ತು ಆರ್‌ವಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಉಪಕ್ರಮವಾದ ವಿರಿನ್ (ವಿಪ್ರೋ-ಐಐಎಸ್‌ಸಿ ಸಂಶೋಧನೆ ಮತ್ತು ನಾವೀನ್ಯತೆ ನೆಟ್‌ವರ್ಕ್) ಎಂಬ ಚಾಲಕರಹಿತ ಕಾರನ್ನು ಬೆಂಗಳೂರಿನಲ್ಲಿ ಅನಾವರಣಗೊಳಿಸಲಾಗಿದೆ.

ಇದೇ ಮೊದಲ ಬಾರಿಗೆ ಬೆಂಗಳೂರಿನ RV ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಚಾಲಕ ರಹಿತ ಕಾರು ಪ್ರಯೋಗಿಕವಾಗಿ ಚಾಲನೆ ಮಾಡಿರುವ ವಿಡಿಯೋ ಸಖತ್‌ ವೈರಲ್‌ ಆಗುತ್ತಿದೆ. ಇದು ನಿಜವಾದ ವಿಡಿಯೋ ಆಗಿದ್ದು, ಡ್ರೈವರ್ಲೆಸ್ ಕಾರು ಪ್ರೋಟೋಟೈಪ್ ಅನ್ನು ಇಲ್ಲಿ ಅನಾವರಣಗೊಳಿಸಲಾಗಿದೆ. ವಿಪ್ರೋ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಮತ್ತು RV ಎಂಜಿನಿಯರಿಂಗ್ ಕಾಲೇಜಿನ ಸಹಯೋಗದಲ್ಲಿ ಈ ಪ್ರೋಟೋಟೈಪ್ ಕಾರನ್ನು ನಿರ್ಮಿಸಲಾಗಿದ್ದು, ಇದಕ್ಕಾಗಿ ಬರೋಬ್ಬರಿ 6 ವರ್ಷಗಳ ಕಾಲ ಪರಿಶ್ರಮ ಹಾಕಲಾಗಿದೆ ಎಂದು ವರದಿಯಾಗಿದೆ.

ವೈರಲ್‌ ಆಗ್ತಿದೆ ಚಾಲಕ ರಹಿತ ಕಾರು ವಿಡಿಯೋ:

ಆದರ್ಶ ಹೆಗಡೆ (@adarshahgd) ಎಂಬ ಸಾಮಾಜಿಕ ಬಳಕೆದಾರರೊಬ್ಬರು ತಮ್ಮ X ಖಾತೆಯಲ್ಲಿ ಇದರ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ. ಉತ್ತರಾದಿಮಠದ ಶ್ರೀ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಆರ್‌ವಿ ಕಾಲೇಜಿನಲ್ಲಿ ಚಾಲಕರಹಿತ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾರೆ. ವಿಪ್ರೋ ಎಂಜಿನಿಯರಿಂಗ್‌ನಿಂದ ಧನಸಹಾಯ ಪಡೆದ ಯೋಜನೆ, ವಿಪ್ರೋ, ಐಐಎಸ್‌ಸಿ ಮತ್ತು ಬೆಂಗಳೂರಿನ ಆರ್‌ವಿ ಎಂಜಿನಿಯರಿಂಗ್ ಕಾಲೇಜು ಜಂಟಿಯಾಗಿ ಅಭಿವೃದ್ಧಿಪಡಿಸಿದೆ. ಅತ್ಯುತ್ತಮ ತಂತ್ರಜ್ಞಾನʼ ಎಂದು ಬರೆದುಕೊಂಡಿದ್ದಾರೆ. ಇನ್ನು, 28 ಸೆಕೆಂಡುಗಳ ವೀಡಿಯೊ ವೈರಲ್ ಆಗಿದೆ.https://x.com/adarshahgd/status/1982843666587955466?ref_src=twsrc%5Etfw%7Ctwcamp%5Etweetembed%7Ctwterm%5E1982843666587955466%7Ctwgr%5Ec6037c35c5d12838d45883beceb0f43ae774060a%7Ctwcon%5Es1_c10&ref_url=https%3A%2F%2Fapi-news.dailyhunt.in%2F

Comments are closed.