Tomato : ಟಮೋಟೊ ದರ ದಿಢೀರ್ ಏರಿಕೆ – ಕೆಜಿ ಅಲ್ಲ, ಒಂದು ಹಣ್ಣಿಗೆ 75 ರೂ!!

Share the Article

Tomato: ಕೆಂಪು ರಾಣಿ ಟಮೊಟೊದರ ಇದೀಗ ದಿಢೀರ್ ಏರಿಕೆ ಕಂಡಿದೆ. ಒಂದು ಕೆಜಿಗೆ ಬರೋಬ್ಬರಿ 600 ಏರಿಕೆ ಕಂಡಿದ್ದು, ಗ್ರಾಹಕರಿಗೆ ಕೈ ದೊಡ್ಡ ಅಘಾತ ನೀಡಿದೆ. ಹಾಗಂತ ಇದು ನಮ್ಮ ದೇಶದಲ್ಲಿ ಏರಿಕೆಯಾದದ್ದಲ್ಲ. ಬದಲಿಗೆ ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ, ಹಣದುಬ್ಬರದ ಕಾರಣ ಈ ರೀತಿ ಟಮೋಟೋ ದರ ಏರಿಕೆ ಆಗಿದೆ.

ಹೌದು, ಪಾಕಿಸ್ತಾನದಲ್ಲಿ ಜನಜೀವನ ದುಬಾರಿ ಆಗಿದ್ದು ದಿನದಿಂದ ದಿನಕ್ಕೆ ಕಷ್ಟಕರವಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆಗಳು ಅತಿಯಾದ ಮಟ್ಟಕ್ಕೆ ಏರಿಕೆಯಾಗಿವೆ. ದಿನನಿತ್ಯ ಬೇಕಾಗುವ ವಸ್ತುಗಳನ್ನು ಗ್ರಾಹಕರು ಕೊಳ್ಳದಂತಹ ಸ್ಥಿತಿ ತಲುಪಿದೆ. ಅಂತೆಯೇ ಟೊಮೆಟೊ ಬೆಲೆ ಕಿಲೋಗೆ ₹600 ತಲುಪಿರುವುದು ಈಗ ಪಾಕಿಸ್ತಾನದಲ್ಲಿನ ದೊಡ್ಡ ಸುದ್ದಿಯಾಗಿದೆ.

ಟೊಮೆಟೊ ಬೆಲೆ ಏಕೆ ಇಷ್ಟು ಏರಿತು?
ಅಕ್ಟೋಬರ್ 11ರಂದು ಅಫ್ಘಾನಿಸ್ತಾನದೊಂದಿಗೆ ಉಂಟಾದ ಗಡಿ ಸಂಘರ್ಷದ ನಂತರ, 2,600 ಕಿಮೀ ಉದ್ದದ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಈ ಗಡಿ ಪಾಕಿಸ್ತಾನದ ಪ್ರಮುಖ ತರಕಾರಿ ಸರಬರಾಜು ಮಾರ್ಗವಾಗಿತ್ತು. ಈಗ ಆಮದು ಸಂಪೂರ್ಣ ಸ್ಥಗಿತಗೊಂಡಿದೆ. ಅದರ ಪರಿಣಾಮವಾಗಿ ಟೊಮೆಟೊ ಸೇರಿದಂತೆ ಎಲ್ಲ ತರಕಾರಿಗಳ ಬೆಲೆ ಗಗನಕ್ಕೇರಿದೆ.

Comments are closed.