BBK-12 : ಬಿಗ್ ಬಾಸ್ ಮನೆಯಿಂದ ಮಲ್ಲಮ್ಮ ಹೊರಕ್ಕೆ?

Share the Article

BBK-12 : ಬಿಗ್ ಬಾಸ್ ಕನ್ನಡ ಸೀಸನ್ 12 ಉತ್ತಮ ಪ್ರತಿಕ್ರಿಯೆಯೊಂದಿಗೆ ಭರ್ಜರಿ ಪ್ರದರ್ಶನವನ್ನು. ಸಾಕಷ್ಟು ಎಕ್ಸ್ಟ್ರಾರ್ಡಿನರಿ ಪ್ರತಿಭೆಗಳು ಈ ಬಾರಿ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಈ ನಡುವೆ ಎಲ್ಲರ ಮೆಚ್ಚುಗೆ ಪಡೆದಿದ್ದ ಮಲ್ಲಮ್ಮ ಅವರು ಬಿಗ್ ಬಾಸ್ ಮನೆಯಿಂದ ಮಧ್ಯದಲ್ಲಿ ಹೊರಕ್ಕೆ ನಡೆದಿದ್ದಾರೆ ಎನ್ನಲಾಗಿದೆ.

ಹೌದು, ಮಲ್ಲಮ್ಮ (Mallamma) ಹೊರ ನಡೆದಿದ್ದಾರೆ ಎಂಬ ಶಾಕಿಂಗ್ ಸುದ್ದಿ ಹೊರ ಬಿದ್ದಿದೆ. ಇದನ್ನು ಕೇಳಿ ಫ್ಯಾನ್ಸ್ ಕೂಡ ಬೇಸರ ಮಾಡಿಕೊಂಡಿದ್ದಾರೆ. ಮಲ್ಲಮ್ಮ ಅವರಿಗೆ ವಯಸ್ಸಾಗಿದೆ. ಆದಾಗ್ಯೂ ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗೂ ಠಕ್ಕರ್ ಕೊಡೋ ರೀತಿಯಲ್ಲಿ ಆಟ ಆಡುತ್ತಿದ್ದರು. ಕೆಲವು ನಿಯಮಗಳು, ಆಟದ ವಿಚಾರಗಳು ಅವರಿಗೆ ಅರ್ಥ ಆಗದೇ ಇದ್ದರು ಅವರಿಗೆ ಸೂಕ್ಷ್ಮತೆಗಳು ತಿಳಿಯುತ್ತಿತ್ತು. ಅವರು ಅನೇಕರ ಫೇವರಿಟ್ ಸ್ಪರ್ಧಿ ಆಗಿದ್ದರು. ಆದರೆ, ಈಗ ವೈಯಕ್ತಿಕ ಕಾರಣಗಳಿಂದ ಅವರು ದೊಡ್ಮನೆಯಿಂದ ಹೊರ ಹೋಗಿದ್ದಾರೆ ಎಂಬ ಸುದ್ದಿ ಹರಿದಾಡಿದೆ.

ಇನ್ನೂ ಮಲ್ಲಮ್ಮ ಕುಟುಂಬದವರೊಬ್ಬರಿಗೆ ಮಗು ಜನಿಸಿದೆ ಎನ್ನಲಾಗಿದೆ. ಈ ಖುಷಿಯ ಕ್ಷಣದಲ್ಲಿ ಅವರು ಭಾಗಿ ಆಗಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ, ಅವರು ಆಟ ತೊರೆದು ದೊಡ್ಮನೆಯಿಂದ ಹೊರ ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ.

Comments are closed.