Bike: ಹೀರೋ ಸ್ಪ್ಲೆಂಡರ್ & ಹೋಂಡಾ ಶೈನ್ ಬೈಕ್ ನಲ್ಲಿ ಯಾವುದು ಬೆಸ್ಟ್?

Bike: ಕಡಿಮೆ ಬಜೆಟ್‌ನಲ್ಲಿ ಉತ್ತಮ ಮೈಲೇಜ್, ಕಡಿಮೆ ಮೇಂಟೈನಸ್ ಇರುವಂತಹ ಬೈಕ್‌ಗಳು ಭಾರತದಲ್ಲಿ ಹೆಚ್ಚು ಮಾರಾಟವಾಗುವ ವಿಭಾಗವಾಗಿದೆ. ಹೀಗಾಗಿ ಭಾರತೀಯ ಮಾರುಕಟ್ಟೆಯಲ್ಲಿ ಹೀರೋ ಸ್ಪ್ಲೆಂಡರ್ ಮತ್ತು ಹೋಂಡಾ ಶೈನ್ ಹೆಚ್ಚಾಗಿ ಮಾರಾಟವಾಗುತ್ತವೆ. ಹಾಗಾದ್ರೆ ಇವುಗಳಲ್ಲಿ ಯಾವುದು ಬೆಸ್ಟ್?

ಹೊಂಡ ಶೈನ್ 100
ಸ್ಟೈಲಿಶ್ ಲುಕ್‌ನೊಂದಿಗೆ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಅತ್ಯುತ್ತಮ ಬೈಕ್ ಹೋಂಡಾ ಶೈನ್ 100. ಎಂಜಿನ್: 98.98cc, ಪವರ್: 7.38 bhp, ಮೈಲೇಜ್: 55-60 km/l, ಬೆಲೆ: ರೂ. 63,191 (ಎಕ್ಸ್-ಶೋರೂಂ). ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಅತ್ಯುತ್ತಮ ಬೈಕ್‌ಗಳಲ್ಲಿ ಇದೂ ಒಂದು.
ಪರ್ಲ್ ಇಗ್ನಿಯಸ್ ಬ್ಲಾಕ್, ಇಂಪೀರಿಯಲ್ ರೆಡ್ ಮೆಟಾಲಿಕ್, ಅಥ್ಲೆಟಿಕ್ ಬ್ಲೂ ಮೆಟಾಲಿಕ್ ಮತ್ತು ಜಿನೀ ಗ್ರೇ ಮೆಟಾಲಿಕ್ ಬಣ್ಣದಲ್ಲಿ ಲಭ್ಯವಿದೆ. ಹೋಂಡಾ ಶೈನ್ 98.98 ಸಿಸಿ 4-ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರಲಿದೆ. ಈ ಉತ್ಪನ್ನವು 5.43 kW ಶಕ್ತಿ ಮತ್ತು 8.05 Nm ಟಾರ್ಕ್ ನೀಡುತ್ತದೆ. ಹೋಂಡಾ ಶೈನ್ 100 ಬೈಕ್‌ನಲ್ಲಿ ನಿಮ್ಮ ಆಯ್ಕೆಗೆ ತಕ್ಕಂತೆ ಸ್ವಯಂ ಮತ್ತು ಕಿಕ್ ಸ್ಟಾರ್ಟ್ ಎರಡು ವಿಭಾಗಗಳಲ್ಲಿ ಸಿಗಲಿದೆ. ಇದು ಸಿಬಿಎಸ್ ಬ್ರೇಕಿಂಗ್ ಸಿಸ್ಟಮ್ ಅನ್ನು ಹೊಂದಿದೆ. ಬಹುಮುಖ್ಯವಾಗಿ ಹೋಂಡಾ ಶೈನ್ 100 ಬೈಕ್‌ನಲ್ಲಿ 9 ಲೀಟರ್ ಪೆಟ್ರೋಲ್ ಟ್ಯಾಂಕ್ ನೀಡಲಾಗಿದ್ದು, 65-70 ಕಿ.ಮೀ. ಮೈಲೇಜ್ ನೀಡುತ್ತದೆ.
ಹೀರೋ ಸ್ಪ್ಲೆಂಡರ್ ಪ್ಲಸ್
ಹೀರೋ ಸ್ಪ್ಲೆಂಡರ್ ಪ್ಲಸ್ ಈ ಪಟ್ಟಿಯಲ್ಲಿದೆ. ಇದು ದೇಶದಲ್ಲಿ ಹೆಚ್ಚು ಮಾರಾಟವಾಗುವ ಮತ್ತು ಹೆಚ್ಚು ಜನಪ್ರಿಯವಾದ ಬೈಕ್ ಆಗಿದೆ. ಇದು ಅತ್ಯುತ್ತಮ ಮೈಲೇಜ್, ಕಡಿಮೆ ತೂಕ ಮತ್ತು ಸವಾರಿ ಮಾಡಲು ಸುಲಭವಾಗಿದೆ. ಜಿಎಸ್ಟಿ ಕಡಿತದ ನಂತರ, ಇದರ ಬೆಲೆ ಗಮನಾರ್ಹವಾಗಿ ಕಡಿಮೆಯಾಗಿದೆ. ಈಗ ಇದರ ಎಕ್ಸ್-ಶೋರೂಂ ಬೆಲೆ ರೂ. 73,902 ರಿಂದ ಪ್ರಾರಂಭವಾಗುತ್ತದೆ. ಆದಾಗ್ಯೂ, ಮೈಲೇಜ್ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಇದು ಪ್ರತಿ ಲೀಟರ್ ಪೆಟ್ರೋಲ್‌ಗೆ 70 ಕಿಲೋಮೀಟರ್‌ಗಳಿಗಿಂತ ಹೆಚ್ಚು ಪಡೆಯುತ್ತದೆ ಎಂದು ಹೇಳಲಾಗುತ್ತದೆ.
ಇದು 97.2 ಸಿಸಿ ಸಿಂಗಲ್ ಸಿಲಿಂಡರ್ 4 ಸ್ಟ್ರೋಕ್ ಬಿಎಸ್ 6 ಎಂಜಿನ್ ಹೊಂದಿದೆ. ಇದು 7.91bhp ಪವರ್ ಮತ್ತು 8.05nm ಟಾರ್ಕ್ ನೀಡುತ್ತದೆ. ಜೊತೆಗೆ 4-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಹೊಂದಿದೆ. ಇನ್ನು ಹೀರೋ ಸ್ಪ್ಲೆಂಡರ್‌ನಲ್ಲಿ ಅನಲಾಗ್ ಮೀಟರ್ ಅನ್ನು ನೀಡಲಾಗುತ್ತದೆ. ಇದು i3S ತಂತ್ರಜ್ಞಾನವನ್ನು ಹೊಂದಿದೆ. 5-ಹಂತದ ಹೊಂದಾಣಿಕೆ ಸಸ್ಪೆನ್ಷನ್ ಸಹ ನೀಡಲಾಗಿದ್ದು, ರೈಡಿಂಗ್‌ಗೆ ಉತ್ತಮವಾಗಿದೆ. ಇನ್ನು, ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ಗಳಿವೆ.
Comments are closed.