RSS: ಮಹತ್ವದ ಹುದ್ದೆಗೆ RSS ಕಾರ್ಯಕರ್ತನ ನೇಮಕ: ಸಿಎಂ ಗೆ ಕ್ಷಮೆ ಕೇಳಿದ ಕಾಂಗ್ರೆಸ್ ಶಾಸಕ ಷಡಾಕ್ಷರಿ

Share the Article

RSS: ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಗಣವಸ್ತ್ರ ಧರಿಸಿ ಭಾಗಿಯಾಗಿದ್ದ ತಿಪಟೂರಿನ ವೈದ್ಯ ಶ್ರೀಧರ್‌ ಹೆಸರನ್ನು ಯಶಸ್ವಿನಿ ಟ್ರಸ್ಟ್‌ನಿಂದ ತೆಗೆಯಲಾಗಿದೆ. ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗಿಯಾಗಿದ್ದ ವೈದ್ಯರಿಗೆ ಸರಕಾರದ ಯಶಸ್ವಿನಿ ಟ್ರಸ್ಟ್‌ ಟ್ರಸ್ಟಿಯಾಗಿ ನೇಮಕ ಮಾಡಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ರಾಜ್ಯ ಸರಕಾರ ಆದೇಶವನ್ನು ವಾಪಸ್‌ ಪಡೆದುಕೊಂಡಿದೆ. ಶ್ರೀಧರ್‌ ಅವರ ನೇಮಕಕ್ಕೆ ತಿಪಟೂರು ಕಾಂಗ್ರೆಸ್‌ ಶಾಸಕ ಷಡಾಕ್ಷರಿ ಅವರೇ ಶಿಫಾರಸು ಮಾಡಿದ್ದಾರೆ ಎನ್ನುವ ಆರೋಪದ ಕುರಿತು ವರದಿಯಾಗಿದೆ.

ಈ ಕುರಿತು ಷಡಾಕ್ಷರಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಈ ಪ್ರಕರಣದಿಂದ ಸಿಎಂ ಅವರಿಗೆ ಮುಜುಗರವಾಗಿದ್ದರೆ ಕ್ಷಮೆ ಕೇಳುತ್ತಾರೆ. ಡಾ.ಶ್ರೀಧರ್‌ ಆರ್‌.ಎಸ್‌.ಎಸ್‌.ನಲ್ಲಿ ಸಕ್ರಿಯವಾಗಿರುವುದು ನನಗೆ ಗೊತ್ತಿರಲಿಲ್ಲ. ಅಭಿಮಾನಿಗಳು ಜನರ ಸೇವೆ ಮಾಡಿದ್ದಾರೆ ಅವಕಾಶ ನೀಡಿ ಎಂದು ಪ್ರಸ್ತಾಪ ಮಾಡಿದ್ದರು. ಉಚಿತ ಆಪರೇಷನ್‌, ಔಷಧಿ ನೀಡಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಮನವಿ ಮಾಡಿದ್ದೆ. ಆರ್‌.ಎಸ್‌.ಎಸ್‌ ಅನ್ನು ನಾವು ಬೆಂಬಲಿಸುವುದಿಲ್ಲ. ನನಗೆ ಆರ್‌.ಎಸ್‌.ಎಸ್‌ ಸಂಪರ್ಕ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Comments are closed.