Mangaluru : ನಕಲಿ ಷೇರು ಮಾರುಕಟ್ಟೆಯಿಂದ ಮಹಾ ಮೋಸ – 11 ಲಕ್ಷ ಕಳೆದುಕೊಂಡ ಮಂಗಳೂರಿನ ಮಹಿಳೆ !!

Share the Article

Mangaluru : ದಕ್ಷಿಣ ಕನ್ನಡ ಜಿಲ್ಲೆಯ ಜನರು ಇತ್ತೀಚೆಗೆ ವಂಚನೆಗೆ ಸುಲಭವಾಗಿ ತುತ್ತಾಗುತ್ತಿದ್ದಾರೆ. ಅದರಲ್ಲೂ ಮಹಿಳೆಯರೇ ಹೆಚ್ಚು. ಇದೀಗ ಅಂತಹುದೇ ಒಂದು ಪ್ರಕರಣದಲ್ಲಿ ನಕಲಿ ಷೇರು ಮಾರುಕಟ್ಟೆ ನಂಬಿ ಮಹಿಳೆಯೊಬ್ಬರು 11 ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ.

ಹೌದು, ಫೇಸ್ಬುಕ್ ವೀಕ್ಷಿಸುತ್ತಿದ್ದಾಗ ಷೇರು ಮಾರುಕಟ್ಟೆಗೆ ಸಂಬಂಧಿಸಿದ ಜಾಹೀರಾತನ್ನು ನೋಡಿ, ಅದರಲ್ಲಿ ನೀಡಲಾದ ಲಿಂಕ್ https://www.inuva-hnw.com/login ಅನ್ನು ತೆರೆಯುವ ಮೂಲಕ ತಮ್ಮ ವಾಟ್ಸಪ್ ನಂಬರ 9901826835 ಮುಖಾಂತರ NUVAMA-J289HIGH- Energy Growth Circle ವಾಟ್ಸ ಗ್ರೂಪ್ ಗೆ ಜಾಯಿನ್ ಆಗಿದ್ದಾರೆ. ನಂತರ ಕೆಲವು ವಾಟ್ಸಾಪ್ ನಂಬರ್ ಗಳಿಂದ ಬಂದ ಕ್ಲಾಸ್ ಗಳನ್ನು ಕೂಡ ಅವರು ಕೇಳಿದ್ದಾರೆ.

ಬಳಿಕ ಪಿರ್ಯಾದಿದಾರರು ತಮ್ಮ ಸ್ಟೇ ಟ್ ಬ್ಯಾಂಕ್ ಆಪ್ ಇಂಡಿಯಾ ಖಾತೆ ಮತ್ತು ತಮ್ಮ ಪತಿಯ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಖಾತೆಗಳಿಂದ 25-09-2025 ರಿಂದ 09-10-2025ರ ನಡುವೆ ಒಟ್ಟು 11,45,600/- ಮೊತ್ತವನ್ನು ಆರೋಪಿಗಳು ತಿಳಿಸಿದ ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದಾರೆ. ನಂತರ ಪಿರ್ಯಾದಿದಾರರು ಹೂಡಿಕೆ ಮಾಡಿದ ಹಣವನ್ನು ಹಿಂತೆಗೆದುಕೊಳ್ಳಲು ಪ್ರಯತ್ನಿಸಿದಾಗ “NUVAMA-J289HIGH-Energy Growth Circle” ಎಂಬ ವಾಟ್ಸಪ್ ಗ್ರೂಪ್ನ ಸದಸ್ಯರು ಯಾವುದೇ ಪ್ರತಿಕ್ರಿಯೆ ನೀಡಿರುವುದಿಲ್ಲ.ಇದರಿಂದ ಪಿರ್ಯಾದಿದಾರರಿಗೆ ಆನ್ಲೈನ್ ಮೋಸ ಹೋಗಿರುವುದು ತಿಳಿದು ಬಂದಿದೆ. ಬಳಿಕ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Comments are closed.