Appu Star Fandom: ದಿ.ಪುನೀತ್ ರಾಜ್‌ಕುಮಾರ್ ಕನಸಿನ ‘ಅಪ್ಪು ಫ್ಯಾನ್ ಡಮ್’ ಆ್ಯಪ್ ಅನಾವರಣ

Appu Star Fandom: ದಿ.ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಕನಸಿನ ಆ್ಯಪ್ `ಅಪ್ಪು ಫ್ಯಾನ್ ಡಮ್’ (Appu Fandom App) ಅನಾವರಣಗೊಂಡಿದೆ.

ಆ್ಯಪ್, ಎಐ ತಂತ್ರಜ್ಞಾನದ ಮೂಲಕ ಅಭಿಮಾನಿಗಳನ್ನು ತಲುಪುವ ಸದುದ್ದೇಶದೊಂದಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ನೇತೃತ್ವದಲ್ಲಿ ಸಿದ್ಧವಾಗಿರುವ ಆ್ಯಪ್‌ನ್ನು ಶನಿವಾರ (ಅ.25) ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಲೋಕಾರ್ಪಣೆ ಮಾಡಿದರು.
ಆ್ಯಪ್ ಲೋಕಾರ್ಪಣೆ ವೇಳೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮಾತನಾಡಿ, ನಿಮಗೆ ಗೊತ್ತಿರುವಂತೆ ಅಪ್ಪು ಯಾವಾಗಲೂ ಹೊಸತನದ ಕಡೆಗೆ ಹುಡುಕಾಟ ನಡೆಸುತ್ತಿದ್ದರು. ಹೊಸತನದ ಹುಡುಕಾಟದಿಂದಲೇ ಹೊಸಬರಿಗೆ ಅವಕಾಶ ಕೊಡಲೆಂದೇ ಪಿಆರ್‌ಕೆ ಕೂಡ ಶುರುವಾಗಿದ್ದು, ಇಂಡಸ್ಟ್ರಿಗೆ ಏನಾದ್ರೂ ಕೊಡುಗೆ ಕೊಡ್ಬೇಕು ಎಂದು ಹೇಳುತ್ತಿದ್ದರು. ಸಮರ್ಥ್ ಅವರ ಟೀಂ ಒಂದು ಐಡಿಯಾ ತೆಗೆದುಕೊಂಡು ಬಂದಿದ್ದರು. ಅದನ್ನು ಸಾಕಷ್ಟು ಡೆವೆಲೆಪ್ ಮಾಡಿ, ಸಿನಿಮಾ, ಫಿಟ್ನೆಸ್, ಮಕ್ಕಳಿಗಾಗಿ ವಿಶೇಷ ಕಂಟೆಟ್‌ಗಳು ಬರಲಿವೆ. ಇದು ಕೇವಲ ನಮ್ಮ ಆ್ಯಪ್ ಅಲ್ಲ, ನಿಮ್ಮ ಆ್ಯಪ್ ಎಂದು ಹೇಳಿದರು.
Comments are closed.