Jio offer: ಜಿಯೋ ಹೊಸ ಪ್ಲಾನ್: ದಿನಕ್ಕೆ 3GB ಡೇಟಾ, ಉಚಿತ Netflix ಮತ್ತು Hotstar ಫ್ರೀ

Jio offer: ಪ್ರತಿಯೊಂದು ಕಂಪನಿಯೂ ತನ್ನ ಗ್ರಾಹಕರಿಗೆ ಹೊಸ ಆಕರ್ಷಕ ಆಫರ್ಗಳನ್ನು ನೀಡುತ್ತಿದೆ. ಅದರಲ್ಲಿ ಜಿಯೋ (Jio offer) ತನ್ನ ಪ್ರೀಪೇಯ್ಡ್ ಬಳಕೆದಾರರಿಗಾಗಿ ಹೊಸ ಪ್ಲಾನ್ಗಳನ್ನು ಪರಿಚಯಿಸಿದೆ.

ಜಿಯೋ ಹೊಸ ₹1799 ಪ್ಲಾನ್ನಲ್ಲಿ ದಿನಕ್ಕೆ 3GB ಡೇಟಾ ಜೊತೆಗೆ ಉಚಿತ Netflix ಸಬ್ಸ್ಕ್ರಿಪ್ಶನ್ ಸೌಲಭ್ಯವನ್ನು ನೀಡುತ್ತಿದೆ. ಈ ಪ್ಲಾನ್ 84 ದಿನಗಳಿಗೆ ಅಸೀಮಿತ ವಾಯ್ಸ್ ಕಾಲಿಂಗ್ ಹಾಗೂ ದಿನಕ್ಕೆ 100 SMSಗಳು ಉಚಿತವಾಗಿ ಲಭ್ಯ. ಜೊತೆಗೆ Jio 5G ಡೇಟಾ ಸಹ ಅನ್ಲಿಮಿಟೆಡ್ ಆಗಿದೆ. ಜೊತೆಗೆ Jio TV ಮತ್ತು Jio AI Cloud ಸೇವೆಗಳು ಲಭ್ಯ ಇರುತ್ತೆ.
ಇನ್ನು ₹1799 ಪ್ಲಾನ್ ದುಬಾರಿ ಎಂದು ತೋರುತ್ತಿದ್ದರೆ, ಜಿಯೋ ₹1199 ಪ್ಲಾನ್ ನೀಡಿದೆ. ಇದಕ್ಕೂ 84 ದಿನಗಳ ಕಾಲಾವಧಿ ಇದ್ದು, ದಿನಕ್ಕೆ 3GB ಡೇಟಾ, ಅನಿಯಮಿತ ಕಾಲಿಂಗ್ ಹಾಗೂ 100 SMSಗಳ ಸೌಲಭ್ಯವಿದೆ. ಆದರೆ Netflix ಈ ಪ್ಯಾಕ್ನಲ್ಲಿ ಇರದು, ಬದಲಿಗೆ ಮೂರು ತಿಂಗಳ Jio Hotstar ಉಚಿತ ಮೊಬೈಲ್ ಸಬ್ಸ್ಕ್ರಿಪ್ಶನ್ ನೀಡಲಾಗುತ್ತದೆ.
Comments are closed.