FIR: ಸ್ನೇಹಿತೆಯ ಖಾಸಗಿ ಫೋಟೋ ತೆಗೆದು ಬ್ಲಾಕ್ ಮೇಲ್ – ಕನ್ನಡದ ಖ್ಯಾತ ನಟಿ ವಿರುದ್ಧ FIR ದಾಖಲು

FIR: ಕನ್ನಡ ಧಾರಾವಾಹಿಗಳಲ್ಲಿ ಗುರುತಿಸಿಕೊಂಡಿರುವ ಕಿರುತೆರೆ ನಟಿ ಆಶಾ ಜೋಯಿಸ್ ಮೇಲೆ ಬ್ಲ್ಯಾಕ್ಮೇಲ್ ಆರೋಪ ಕೇಳಿಬಂದಿದ್ದು, ತಿಲಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೌದು, ಹಲವು ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿರುವ ಆಶಾ ಜೋಯಿಸ್ ಎಂಬಾಕೆಯ ವಿರುದ್ದ ಸ್ನೇಹಿತೆಯೊಬ್ಬಳ ಖಾಸಗಿ ಫೋಟೋ ಕದ್ದು, ಅದನ್ನು ಹಂಚುವುದಾಗಿ ಬ್ಲಾಕ್ ಮೇಲ್ ಮಾಡಿದ ಆರೋಪದ ಮೇಲೆ ಪಾರ್ವತಿ ಎಂಬುವವರು ದೂರು ನೀಡಿದ್ದಾರೆ.
ಆಶಾ ಅವರು ಸೀರಿಯಲ್ ನಟಿ ಎಂದು ಪಾರ್ವತಿ ಬಳಿ ಪರಿಚಯ ಮಾಡಿಕೊಂಡಿದ್ದರು. ಪಾರ್ವತಿ ತಾವು ಕೆಲಸ ಮಾಡುತ್ತಿದ್ದ ಕಂಪನಿ ಮಾಲೀಕರ ಜೊತೆಯೇ ಮದುವೆ ಆಗಿದ್ದರು. ಪತಿಗೆ ಬ್ಲ್ಯಾಕ್ಮೇಲ್ ಮಾಡಲು ಪಾರ್ವತಿಗೆ ಆಶಾ ಬಲವಂತೆ ಮಾಡಿದ್ದರಂತೆ. ಜೊತೆಗೆ 2 ಕೋಟಿ ಹಣಕ್ಕೆ ಬ್ಲ್ಯಾಕ್ಮೇಲ್ ಮಾಡುವಂತೆ ಒತ್ತಡ ಹೇರಿದ್ದರು ಎನ್ನಲಾಗಿದೆ. ಇದಕ್ಕೆ ಪಾರ್ವತಿ ಒಪ್ಪದಿದ್ದಕ್ಕೆ ಖಾಸಗಿ ವಿಡಿಯೋಗಳು, ವಾಯ್ಸ್ ರೆಕಾರ್ಡ್ ಹಾಗೂ ಖಾಸಗಿ ಫೋಟೋಗಳನ್ನ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ.
ಆದರೆ, ಪಾರ್ವತಿ ಈ ಬೆದರಿಕೆಗೆ ಹೆದರಿಲ್ಲ. ನಂತರ ವಿಡಿಯೋ ಹಾಗೂ ಫೋಟೋಗಳನ್ನು ಪಾರ್ವತಿ ತಮ್ಮ ಪರಿಚಯ ಇರುವ ವ್ಯಕ್ತಿಗಳಿಗೆ ಕಳಿಸಿದ್ದರಂತೆ. ಈ ಹಿನ್ನಲೆಯಲ್ಲಿ ತನ್ನ ಘನತೆಗೆ ಕುಂದುಂಟಾಗಿದೆ ಹಾಗು ತನ್ನ ಖಾಸಗಿ ಡೇಟಾವನ್ನ ಕದ್ದಿದ್ದಾರೆಂದು ಆರೋಪಿಸಿ ಪಾರ್ವತಿ ದೂರಿನಲ್ಲಿ ತಿಳಿಸಿದ್ದಾರೆ.
Comments are closed.