Crime: ಹೆಂಡತಿಯ ಜೊತೆ ಗಲಾಟೆ, ಮಗಳನ್ನೇ ಕತ್ತು ಹಿಸುಕಿ ಕೊಂದ ತಂದೆ!

Crime: ಬೆಂಗಳೂರಿನಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ಮಲತಂದೆಯೊಬ್ಬ ಏಳು ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಕುಂಬಳಗೊಡಿನ ಕನ್ನಿಕಾ ಬಡಾವಣೆಯಲ್ಲಿ ನಡೆದಿದೆ.

ಸಿರಿ (7) ಮೃತ ಬಾಲಕಿ. ಮೃತ ಸಿರಿ ತಾಯಿಯ ಪತಿ ಮೃತಪಟ್ಟ ಕಾರಣ ಕಳೆದ ಕೆಲ ತಿಂಗಳ ಹಿಂದೆ ದರ್ಶನ್ ಎಂಬಾತನ ಜೊತೆ ಎರಡನೇ ಮದುವೆಯಾಗಿದ್ದರು. ಆದರೆ ಮದುವೆ ಆದಾಗಿನಿಂದ ಇವರಿಬ್ಬರ ನಡುವೆ ಗಲಾಟೆಗಳು ನಡೆಯುತ್ತಲೇ ಇತ್ತು. ಈ ಗಲಾಟೆ ನಂತರ ವಿಕೋಪಕ್ಕೆ ಹೋಗಿದ್ದು, ಪತ್ನಿ ಮೇಲಿನ ಸಿಟ್ಟನ್ನು ದರ್ಶನ್ ಆಕೆಯ ಮಗಳ ತೋರಿಸಿ, ಕೊಲೆ ಮಾಡಿದ್ದಾನೆ. ನಂತರ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ಮಾಡಿದ್ದು ಆರೋಪಿ ದರ್ಶನ್‌ಗೆ ಬಲೆ ಬೀಸಿದ್ದಾರೆ.
Comments are closed.