CT Ravi: RSS ನೋಂದಣಿ ಕುರಿತು ಮಾಹಿತಿ ಕೇಳಿದ ಪ್ರಿಯಾಂಕ್ ಖರ್ಗೆ – ವೈರಲ್ ಆಯ್ತು ಸಿಟಿ ರವಿ ಕೊಟ್ಟ ಉತ್ತರ

Share the Article

 

C T Ravi: ರಾಜ್ಯದಲ್ಲಿ ಆರ್ ಎಸ್ ಎಸ್ ಮತ್ತು ಕಾಂಗ್ರೆಸ್ ನಡುವಿನ ಜಟಾಪಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಅದರಲ್ಲೂ ಕಾಂಗ್ರೆಸ್ ಸಚಿವ ಪ್ರಿಯಾಂಕ ಖರ್ಗೆ ಅವರು ಆರ್ ಎಸ್ ಎಸ್ ಅನ್ನು  ತೀವ್ರವಾಗಿ ನಿಂದಿಸುತ್ತಾ ಬಹಿರಂಗವಾಗಿ ಹಲವು ಮಾಹಿತಿಗಳನ್ನು ಕೇಳುತ್ತಿದ್ದಾರೆ. ಅಂತೆಯೇ ಇದೀಗ ಅವರು, RSS ಗೆ ದುಡ್ಡು ಎಲ್ಲಿಂದ ಬರುತ್ತೆ, ಸಂಘ ಅಧಿಕೃತ ಮಾನ್ಯತೆಯನ್ನು ಪಡೆದಿದೆಯಾ, ಸಂಘದ ನೋಂದಣಿ ಮಾಹಿತಿಯನ್ನು ಕೇಳಿದ್ದು ಅದಕ್ಕೆ ಬಿಜೆಪಿ ನಾಯಕ ಸಿಟಿ ರವಿ ಅವರು ಖಡಕ್ ಉತ್ತರ ಕೊಟ್ಟಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

 

ಹೌದು, “ನೂರು ವರ್ಷಗಳ ಇತಿಹಾಸವಿದೆ ಎಂದು ಹೇಳುತ್ತಾರೆ. ಶತಮಾನೋತ್ಸವ ಸಂಭ್ರಮಾಚರಣೆಯನ್ನೂ ಮಾಡಿಕೊಳ್ಳುತ್ತಿದ್ದಾರೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಥಸಂಚಲನಕ್ಕೆ ಅನುಮತಿಯನ್ನು ಪಡೆಯಲು ಅರ್ಜಿಯನ್ನು ಹಾಕಿದ್ದಾರೆ. ಆರ್‌ಎಸ್‌ಎಸ್‌ ನೋಂದಣಿ ಪಡೆದುಕೊಂಡಿದೆಯಾ, ಪಡೆದಿದ್ದರೆ ಮಾಹಿತಿಯನ್ನು ಕೊಡಲಿ ” ಎಂದು ಪ್ರಿಯಾಂಕ್ ಖರ್ಗೆ, ಸವಾಲು ಹಾಕಿದ್ದರು.

 

 ಇದಕ್ಕೆ ಉತ್ತರಿಸಿದ ಸಿಟಿ ರವಿ ಅವರು ಎಲ್ಲಾ ಸಂಘಟನೆಗಳು ರಿಜಿಸ್ಟರ್ ಆಗಬೇಕೆಂದು ಸಂವಿಧಾನದಲ್ಲಿ ಏನೂ ಕಾನೂನು ಇಲ್ಲ. ಕದ್ದುಮುಚ್ಚಿ ಶಾಖೆಗಳು ನಡೆಯುವುದಿಲ್ಲ, ಸಂಘದ ಐಡಿಯಾಲಜಿಯನ್ನು ಒಪ್ಪಿಕೊಂಡು ಯಾರು ಬೇಕಾದರೂ ಬರಬಹುದು. ಆರ್‌ಎಸ್‌ಎಸ್‌ ನಿಂದ ಪ್ರೇರಿತವಾದ ಕೆಲವೊಂದು ಸಂಸ್ಥೆ/ಒಕ್ಕೂಟ/ಪಾರ್ಟಿಗಳು ರಿಜಿಸ್ಟರ್ ಆಗಿವೆ. ಉದಾಹರಣೆಗೆ, ಬಿಜೆಪಿ, ಎಬಿವಿಪಿ, ರಾಷ್ಟ್ರೋತ್ಠಾನ ಪರಿಷತ್, ವಿಶ್ವ ಹಿಂದೂ ಪರಿಷತ್, ಭಾರತೀಯ ಮಜ್ದೂರ್ ಸಂಘ ಇವೆಲ್ಲಾ, ರಿಜಿಸ್ಟರ್ಡ್ ಸಂಸ್ಥೆಗಳು ಎಂದು ಸಿಟಿ ರವಿ ಹೇಳಿದ್ದಾರೆ.

 

ಅಲ್ಲದೆ ” ದೇಶದ ವಿಚಾರವನ್ನು ಇಟ್ಟುಕೊಂಡು, ಸಮಾಜಮುಖಿ ಕೆಲಸ ಮಾಡಲು, ತನ್ನದೇ ಆದ ಕಾರ್ಯ ಪದ್ದತಿಯ ಆಧಾರದಲ್ಲಿ, ಎಲ್ಲರಿಗೂ ಸಂಸ್ಕಾರ ಕೊಡುವ ಮೂಲಕ, ಅವರನ್ನು ರಾಷ್ಟ್ರೀಯತೆಯ ಭಾವನೆಯನ್ನು ಉದ್ದೀಪನಗೊಳಿಸುವ ಉದ್ದೇಶವನ್ನು ಹೊಂದಿರುವ ಸಂಘಟನೆಯೇ ರಾಷ್ಟ್ರೀಯ ಸ್ವಯಂಸೇವಕ ಸಂಘ” ಎಂದು ಸಿಟಿ ರವಿ ಹೇಳಿದ್ದಾರೆ.

Comments are closed.