Bangalore: “2 ಚಿತ್ರ ಮಾಡ್ತಿದ್ದಂತೆ 200 ಸಿನಿಮಾ ಮಾಡಿದವ್ರನ್ನ ಮರೆಯೋ ಕಾಲ”- ಸುದೀಪ್ ಹೇಳಿದ್ದು ಕಾಂತಾರ ಶೆಟ್ರ ಬಗ್ಗೆ?!

Share the Article

Bangalore: ಇದು ಒಂದು ವಿಶೇಷ ಸುದ್ದಿ. ಸುದ್ದಿ ಮಾಡುವಂತಹ ಅಂಥದ್ದೊಂದು ಘಟನೆ ಸ್ಯಾಂಡಲ್‌ವುಡ್‌ನಲ್ಲಿ ಘಟಿಸಿದೆ. ತಮ್ಮ ಸಿನಿಮಾಗಳ ಮೂಲಕ ಹೊಚ್ಚ ಹೊಸ ಟ್ರೆಂಡ್‌ ಸೃಷ್ಟಿಸಿದ ನಿರ್ದೇಶಕ ಎಸ್‌.ವಿ.ರಾಜೇಂದ್ರ ಸಿಂಗ್ ಬಾಬು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 50 ವರ್ಷಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಕನ್ನಡ ಚಿತ್ರರಂಗ ಗೌರವಿಸಿ ಸನ್ಮಾನಿಸಲಾಗಿದೆ. ಎಸ್‌.ವಿ.ರಾಜೇಂದ್ರ ಸಿಂಗ್ ಬಾಬು ಅಂದ್ರೆ ತಟ್ಟನೆ ನೆನಪಾಗೋದು ‘ ಆಪರೇಶನ್ ಅಂತ’, ‘ನಾಗರಹೊಳೆ’, ‘ಮುತ್ತಿನ ಹಾರ’, ‘ಬಂಧನ’ ಮುಂತಾದ ಹೃದಯಕ್ಕೆ ಹತ್ತಿರವಾದ ಹಲವು ಸಿನಿಮಾಗಳು. ಇವರ ಸುದೀರ್ಘ ಸಿನಿಮಾ ಪಯಣವನ್ನು ಹಿಂತಿರುಗಿ ನೋಡಿ ಅವಲೋಕಿಸಿ ನೋಡುವುದೇ ಒಂದು ಮಜಾ. ಹೀಗಾಗಿ ಕನ್ನಡ ಚಿತ್ರರಂಗದ ದಿಗ್ಗಜ ಕೆಲವರು ಸೇರಿ ಸಿಂಗ್ ರವರಿಗೆ ಸನ್ಮಾನಿಸಿದ್ದಾರೆ. ಈ ಸಂದರ್ಭ. ಕಿಚ್ಚ ಸುದೀಪ್ ಹೇಳಿದ ಮಾತೊಂದು ಈಗ ಚಿಂತೆಗೆ ಮತ್ತು ಯೋಚನೆಗೆ. ಈಡು ಮಾಡಿದೆ. ಯಾರ ಬಗ್ಗೆ ಅಂದ್ರು ಸುದೀಪ್ ಈ ಮಾತನ್ನು.ಅಂತ ಜನ ತಲೆ ಕೆದರಿ ಯೋಚ್ನೆ ಮಾಡ್ತಾ ಇದ್ದಾರೆ.

ಮೊನ್ನೆ ಚಿತ್ರರಂಗದ ಗಣ್ಯರು, ಎಚ್‌ಡಿ ಕುಮಾರಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಅಶ್ವಥ್‌ ನಾರಾಯಣ್, ಗಿರೀಶ್ ಕಾಸರವಳ್ಳಿ, ಮುನಿರತ್ನ ಸೇರಿದಂತೆ ಕಿಚ್ಚ ಸುದೀಪ್ ಹಿರಿಯ ನಿರ್ದೇಶಕ ಎಸ್‌.ವಿ.ರಾಜೇಂದ್ರ ಸಿಂಗ್ ಬಾಬು ಅವರ ಬಗ್ಗೆ ಮಾತಾಡುತ್ತಾ? ” 2 ಸಿನಿಮಾ ಮಾಡಿರುವವರೂ 200 ಸಿನಿಮಾ ಮಾಡಿದವರನ್ನು ಸುಲಭವಾಗಿ ಮರೆಯುವ ಕಾಲವಿದು” ಎಂದು ಹೇಳಿದ್ದಾರೆ. ಇವರ ಈ ಹೇಳಿಕೆ ಈಗ ವೈರಲ್ ಆಗುತ್ತಿದೆ. ಅಷ್ಟಕ್ಕೂ ಈ ವೇದಿಕೆಯಲ್ಲಿ ಏನು ಹೇಳಿದ್ದಾರೆ, ಯಾರ ಬಗ್ಗೆ ಹೇಳಿದ್ದಾರ ಅನ್ನೋದೇ ಇವತ್ತಿನ ಪ್ರಶ್ನೆ.

ತನಗೆ 9 ವರ್ಷ ಇದ್ದಾಗ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸಿನಿಮಾಗಳು ತಮ್ಮ ಮೇಲೆ ಹೇಗೆ ಪರಿಣಾಮ ಬೀರಿದವು ಅನ್ನೋದನ್ನು ಹೇಳಿಕೊಂಡಿದ್ದಾರೆ ಸುದೀಪ್. “ನನಗೆ ಸಿನಿಮಾ ಪರಿಚಯ ಆಗಿದ್ದು ಶಿವಮೊಗ್ಗದಲ್ಲಿ. ಆಗಲ್ಲಿ ಎರಡೇ ಥಿಯೇಟರ್ ಇದ್ದಿದ್ದು. ಮಲ್ಲಿಕಾರ್ಜುನ ಮತ್ತು ಎಚ್‌ಬಿಸಿ. ನೀವು ನಿರ್ದೇಶಿಸಿದ ನಾಗರಹೊಳೆ ನಾನು ನೋಡಿದ ಮೊದಲ ಸಿನಿಮಾ. ನನಗೆ ಆ ದಿನ ಅಲ್ಪ ಸ್ವಲ್ಪ ನೆನಪಿದೆ. ‘ಅಂತ’ ಸಿನಿಮಾ ನೋಡಿದಾಗ ನನಗೆ 9 ವರ್ಷ. ಆಗಲೇ ನನಗೆ ಮೊದಲು ಸಿನಿಮಾದ ಪರಿಚಯ ಆಗಿದ್ದು. ಸಿನಿಮಾ ಒಂದಕ್ಕೆ ನಿರ್ದೇಶಕ ಅಂತ ಇರುತ್ತಾರೆ. ಸಿನಿಮಾ ತೆಗೆಯೋದು ಹೀಗೆ ಅಂತ ಗೊತ್ತಾಗಿದ್ದು ನಮ್ಮ ಅಂಬರೀಶ್ ಮಾಮನಿಂದ. ಅಂಬರೀಶ್ ತುಂಬಾ ಸಾರಿ ನಮ್ಮ ಮನೆಗೆ ಬರುತ್ತಿದ್ದರು. ಆದರೆ ಅವರನ್ನು ಇಷ್ಟ ಪಡುವುದಕ್ಕೆ ಶುರು ಮಾಡಿದ್ದು ನಿಮ್ಮ ಸಿನಿಮಾ ಅಂತ ಬಂದ್ಮೇಲೆ.” ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

“ಇದು ಎಲ್ಲದನ್ನೂ ಸುಲಭಕ್ಕೆ ಮರೆಯೋ ಕಾಲ” ಎಂದು ಇದೇ ವೇದಿಕೆ ಮೇಲೆ ಹಿರಿಯ ನಿರ್ದೇಶಕರ ಸಾಧನೆ ಬಗ್ಗೆ ಮಾತಾಡಿದ್ದಾರೆ. “ಎಲ್ಲದನ್ನೂ ಸುಲಭವಾಗಿ ಮರೆಯುವಂತಹ ಕಾಲವಿದು. 2 ಸಿನಿಮಾ ಮಾಡುತ್ತಿದ್ದಂತೆ 200 ಸಿನಿಮಾ ಮಾಡಿದಂತಹವರನ್ನು ಮರೆಯುವಂತಹ ಕಾಲವಿದು…ಎಂದಿದ್ದಾರೆ. ಈ ಮಾತು ಇದೀಗ ತಾನೇ ಸೂಪರ್ ಡೂಪರ್ ಸಕ್ಸಸ್ ಆಗಿರುವ ನಟ ನಿರ್ದೇಶಕನ ಬಗ್ಗೆ ಹೇಳಿದ್ದಾರೆ ಅನ್ನುವುದೇ ಗುಸು-ಗುಸು ಸುದ್ದಿ.

“ಈ ವೇದಿಕೆ ಮೇಲೆ ಕೂತುಕೊಳ್ಳುವುದಕ್ಕೆ ಬಹಳ ಹೆಮ್ಮೆಯಾಗುತ್ತೆ. ಯಾಕಂದ್ರೆ, ವೇದಿಕೆಯಲ್ಲಿ ಕೂತಿರುವವರು. ಎದುರುಗಡೆ ಕೂತಿರುವವರು ಯಾರೂ ಕಮ್ಮಿ ಸಾಧಕರಲ್ಲ. ಇಂತಹ ಕಾರ್ಯಕ್ರಮಗಳು ನಡೆದಾಗ ಎಷ್ಟೋ ಸಾವಿರ ಪ್ರಶಸ್ತಿ ಸಮಾರಂಭಕ್ಕಿಂತ ಇದೇ ಉತ್ತಮ ಅಂತ ಅನಿಸುತ್ತೆ.” ಎಂದು ಸುದೀಪ್ ಹೇಳಿದ್ದಾರೆ. ಜತೆಗೆ ಅವರು ಅಲ್ಲಿದ್ದ ಹಂಸಲೇಖರನ್ನೂ ಹೊಗಳಿದ್ದಾರೆ. “ಬಾಬು ಸರ್ ಗಾಗಿ ತುಂಬಾ ಒಳ್ಳೆಯ ಸಾಂಗ್ ಮಾಡಿದ್ದೀರ. ಒಬ್ಬ ವ್ಯಕ್ತಿ 50 ವರ್ಷ ಸಾಧನೆ ಮಾಡಬೇಕು, ಅಂತಹದಕ್ಕೆ ಒಬ್ಬ ಹಂಸಲೇಖ ಸಂಗೀತ ನೀಡಬೇಕು ಅಂದರೆ, ಇವತ್ತಿಗೆ ಅದು ಸಾಧ್ಯನೇ ಆಗದಿರೋ ಒಂದು ಕೆಲಸ. ಎಲ್ಲಕ್ಕಿಂತ ಹೆಚ್ಚಾಗಿ 50 ವರ್ಷ ಈ ಚಿತ್ರರಂಗದಲ್ಲಿ ಇರುವುದಕ್ಕೆ ಆಗೋದು ಇದೆಯಲ್ಲಿ ಅದೇ ಸ್ಪೆಷಲ್. ಇದು ನೀವು ಎಸ್‌ವಿ ರಾಜೇಂದ್ರ ಸಿಂಗ್ ಅವರಿಗೆ ಕೊಟ್ಟಿರುವಂತಹ ಗಿಫ್ಟ್ ಅಂತ ಹೇಳಬಲ್ಲೆ.” ಎಂದಿದ್ದಾರೆ ಕಿಚ್ಚ.

“ಬಾಬು ಸರ್.. ನನಗೆ ನಿಮ್ಮೊಂದಿಗೆ ಕೆಲಸ ಮಾಡುವುದಕ್ಕೆ ಅವಕಾಶ ಸಿಕ್ಕಿಲ್ಲ. ಆದರೆ, ನಿಮ್ಮೊಂದಿಗೆ ಸೆಲೆಬ್ರೆಟ್ ಮಾಡುವುದಕ್ಕೆ ಅವಕಾಶ ಸಿಕ್ಕಿದೆ. ಅದಕ್ಕೆ ಧನ್ಯವಾದಗಳು” ಎಂದು ಸುದೀಪ್ ಹೇಳಿದ್ದಾರೆ.

Comments are closed.