Adhar Card : ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಲು ಮತ್ತೆ ಈ ದಿನದವರೆಗೆ ಅವಕಾಶ !!


Adhar Card: ಆಧಾರ್ ಕಾರ್ಡ್ ಎಂಬುದು ಪ್ರತಿಯೊಬ್ಬ ಭಾರತೀಯನ ಗುರುತಿನ ಚೀಟಿ ಇದ್ದಂತೆ. ಸರ್ಕಾರದ ಯಾವುದೇ ಪ್ರಯೋಜನವನ್ನು ಪಡೆಯಲು ಈ ಆಧಾರ್ ಕಾರ್ಡ್(Adhar card) ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಆಧಾರ್ ಕಾರ್ಡ್ ಅನ್ನು ಪ್ರತಿಯೊಬ್ಬರೂ ಹತ್ತು ವರ್ಷಗಳಿಗೊಮ್ಮೆ ಅಪ್ಡೇಟ್ ಮಾಡಿಸಬೇಕು ಎಂದು ಸರ್ಕಾರ ಆಗಿಂದಲೂ ಹೇಳುತ್ತಲೇ ಬಂದಿದೆ. ಅಲ್ಲದೆ ಇದಕ್ಕೆ ಉಚಿತವಾಗಿ ವ್ಯವಸ್ಥೆಯನ್ನು ಕೂಡ ಕಲ್ಪಿಸಿತ್ತು. ಆದರೂ ಅನೇಕರು ಇನ್ನೂ ಕೂಡ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಲ್ಲ. ಈ ಬೆನ್ನಲ್ಲೇ ಸರ್ಕಾರ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಫೀಸ್ ವಿಧಿಸಿತ್ತು. ಇದೀಗ ಮತ್ತೆ ಈ ದಿನದವರೆಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಉಚಿತ ಅವಕಾಶವನ್ನು ಕಲ್ಪಿಸಿಕೊಟ್ಟಿದೆ.
ಹೌದು, ನಿಮ್ಮ ಆಧಾರ್ ಕಾರ್ಡ್ ಡೇಟಾವನ್ನು ನವೀಕರಿಸಲು/ಸರಿಪಡಿಸಲು ನೀವು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಸೇವೆಯನ್ನು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಒದಗಿಸುತ್ತದೆ. ನೀವು ಹೆಸರು, ಲಿಂಗ, ಜನ್ಮ ದಿನಾಂಕ, ವಿಳಾಸ ಮತ್ತು ಮೊಬೈಲ್ ಸಂಖ್ಯೆಯಂತಹ ಮಾಹಿತಿಯನ್ನು ನವೀಕರಿಸಬಹುದು.
ಈ ಉದ್ದೇಶಕ್ಕಾಗಿ ನೀವು ಆಧಾರ್ ಪೋರ್ಟಲ್ https://myaadhaar.uidai.gov.in/du ಅನ್ನು ಬಳಸಬಹುದು. ಅಂತಹ ನವೀಕರಣಗಳನ್ನು ಮಾಡಲು ನಿಮಗೆ ಒಂದು ಪೈಸೆಯನ್ನೂ ವಿಧಿಸಲಾಗುವುದಿಲ್ಲ ಮತ್ತು ಈ ಆನ್ಲೈನ್ ಸೇವೆಯು ಜೂನ್ 14, 2026 ರವರೆಗೆ ಉಚಿತವಾಗಿರುತ್ತದೆ.
Comments are closed.