Police: ಕಾರ್ಕಳ: ಅಕ್ರಮ ಕಲ್ಲುಕೋರೆಗೆ ಪೊಲೀಸ್ ರೇಡ್ ಪ್ರಕರಣ ದಾಖಲು

Police: ಕಾರ್ಕಳ ತಾಲೂಕು ಎರ್ಲಪಾಡಿ ಗ್ರಾಮದ ಜಾರ್ಕಳ ಸರ್ಕಾರಿ ಜಾಗದ ಸ.ನಂ 245/* ರಲ್ಲಿ ಕಲ್ಲುಕೋರೆ ಪಾದೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ (ಕಾ.ಸು& ಸಂಚಾರ) ಮುರಳೀಧರ ನಾಯ್ಕ್ ಮತ್ತು ಸಿಬ್ಬಂದಿಗಳು ಅಕ್ಟೋಬರ್ 22 ರಂದು ದಾಳಿ ನಡೆಸಿದ್ದಾರೆ.

ಈ ವೇಳೆ ಕಲ್ಲು ಕೋರೆ ಪ್ರದೇಶದಲ್ಲಿ ರಾಜೇಶ ಶೆಟ್ಟಿ ಎಂಬಾತ ಅಕ್ರಮವಾಗಿ ಸುಮಾರು 9,500/- ರೂ. ಮೌಲ್ಯದ 800 ಸೈಜು ಶಿಲೆ ಕಲ್ಲುಗಳನ್ನು ಸಾಗಾಟ ಮಾಡಲು ರಾಶಿ ಹಾಕಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.