Kantara-1: ಇನ್ನೂ ಮುಗಿಯದ ‘ಕಾಂತರಾ-1’ ಅಬ್ಬರ ! 1,000 ಕೋಟಿ ಗಳಿಸಲು ಇನ್ನೆಷ್ಟು ಬಾಕಿ?

Share the Article

Kantara-1: ಕನ್ನಡ ಚಿತ್ರರಂಗವನ್ನು ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿರುವ ಕಾಂತರಾ ಚಾಪ್ಟರ್ 1 ಸಿನಿಮಾ ಅಬ್ಬರದ ಪ್ರದರ್ಶನ ಕಾಣುತ್ತಿದೆ. ಭಾರತ ಚಿತ್ರರಂಗದ ಹಲವು ಚಿತ್ರಗಳ ದಾಖಲೆಯನ್ನು ಮುರಿದು ಮುನ್ನುಗ್ಗುತ್ತಿದೆ. ದಿನದಿನವೂ ಚಿತ್ರದ ಕಲೆಕ್ಷನ್ ಹೆಚ್ಚಾಗುತ್ತಿದೆಯೇ ಹೊರತು ತಟಸ್ಥ ಕಾಯ್ದುಕೊಳ್ಳುತ್ತಿಲ್ಲ. ಮೂರನೇ ಬುಧವಾರವೂ ಚಿತ್ರ ಡಬಲ್ ಡಿಜಿಟ್ ಕಲೆಕ್ಷನ್ ಮಾಡಿದೆ ಎಂಬುದು ವಿಶೇಷ. ಈ ಸಿನಿಮಾದ ಗಳಿಕೆ ಹಿಗೆಯೇ ಮುಂದುವರಿದರೆ ಶೀಘ್ರವೇ ಚಿತ್ರ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರುವ ಎಲ್ಲಾ ಸಾಧ್ಯತೆ ಇದೆ. ಹಾಗಿದ್ರೆ ಕಾಂತಾರ-1 ಸಾವಿರ ಕೋಟಿಗೊಳಿಸಲು ಇನ್ನೆಷ್ಟು ಬಾಕಿ? ಗೊತ್ತಾ?

ಹೌದು, ‘ಕಾಂತಾರ: ಚಾಪ್ಟರ್ 1’ ಸಿನಿಮಾ ವಿಶ್ವ ಮಟ್ಟದಲ್ಲಿ ಎಷ್ಟು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಕೆಲವು ವರದಿಗಳ ಪ್ರಕಾರ ಈ ಸಿನಿಮಾ ವಿಶ್ವ ಮಟ್ಟದಲ್ಲಿ 850 ಕೋಟಿ ರೂಪಾಯಿ ಗಳಿಕೆ ಮಾಡಿದೆಯಂತೆ. ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಲು ಚಿತ್ರಕ್ಕೆ ಬೇಕಿರೋದು ಕೆಲವೇ ಕೋಟಿಗಳು ಮಾತ್ರ ಎನ್ನಲಾಗಿದೆ.

ಇನ್ನೂ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 22ರಂದು ಬರೋಬ್ಬರಿ 10 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 10.25 ಕೋಟಿ ರೂಪಾಯಿ ಆಗಿದೆ. ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ಸರಿ ಸಮಾನವಾಗಿ ಕಲೆಕ್ಷನ್ ಮಾಡುತ್ತಿದೆ. ಅಕ್ಟೋಬರ್ 21ರಂದು ಹಿಂದಿಯಲ್ಲಿ 4 ಕೋಟಿ ಗಳಿಕೆ ಆದರೆ, ಕನ್ನಡದಲ್ಲಿ 4.6 ಕೋಟಿ ರೂಪಾಯಿ ಆಗಿದೆ.

Comments are closed.