Hasanambe: ಹಾಸನಾಂಬೆ ದರ್ಶನಕ್ಕೆ ತೆರೆ – ಈ ಬಾರಿ ಭೇಟಿ ಕೊಟ್ಟವರೆಷ್ಟು? ಹಣ ಕಲೆಕ್ಷನ್‌ ಎಷ್ಟು?

Share the Article

Hasanambe: ನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ದೀಪಾವಳಿಗೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾಸನದ ಹಾಸನಾಂಬೆಯ ಸಾರ್ವಜನಿಕ ದರ್ಶನಕ್ಕೆ ಇಂದು ತೆರೆ ಬೀಳಲಿದೆ. ಈ ಬೆನ್ನಲ್ಲೇ ಈ ವರ್ಷ ದೇವಿಯ ದರ್ಶನಕ್ಕಾಗಿ ಬೇಟಿ ಕೊಟ್ಟವರ ಸಂಖ್ಯೆ ಹಾಗೂ ಕಲೆಕ್ಷನ್ ಆದ ಹಣ ಎಷ್ಟು ಎಂಬುದರ ಬಗ್ಗೆ ಚರ್ಚೆಯಾಗುತ್ತಿದೆ. ಈ ಬಗ್ಗೆ ಇಲ್ಲಿದೆ ನೋಡಿ ಡಿಟೇಲ್ಸ್.

ಒಟ್ಟು 13 ದಿನ ಹಾಸನಾಂಬಾ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿದ್ದು, ಇಂದು ಸಂಜೆ 7ರಿಂದಲೇ ಸಾರ್ವಜನಿಕ ದರ್ಶನ ಬಂದ್ ಆಗಿದೆ. ಗರ್ಭಗುಡಿ ಮುಚ್ಚಿ ಸಂಜೆ 7ರಿಂದ ತಾಯಿಗೆ ವಿಶೇಷ ಅಲಂಕಾರ, ಪೂಜೆ ಮಾಡಲಾಗ್ತಿದೆ. ಮತ್ತೆ ಮಧ್ಯರಾತ್ರಿ 12ಕ್ಕೆ ದೇಗುಲ ಓಪನ್ ಮಾಡಲಾಗುತ್ತೆ. ಸ್ಥಳೀಯರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತೆ.

ಈ ಬಾರಿ ಬರೋಬ್ಬರಿ 26 ಲಕ್ಷ ಜನ ಹಾಸನಾಂಬೆ ದರ್ಶನ ಪಡೆದಿದ್ದಾರೆ. ಟಿಕೆಟ್ ಮಾರಾಟದಿಂದಲೇ 22 ಕೋಟಿ ರೂಪಾಯಿ ಸಂಗ್ರಹವಾಗಿದೆ. ಕಳೆದ ವರ್ಷ 17 ಲಕ್ಷ 46 ಸಾವಿರ ಜನ ದೇವಿ ದರ್ಶನ ಪಡೆದಿದ್ರು. ಕಳೆದ ವರ್ಷ ಕೇವಲ 9 ಲಕ್ಷ 68 ಸಾವಿರ ರೂಪಾಯಿ ಸಂಗ್ರಹವಾಗಿತ್ತು.

ಈ ಬಾರಿ ಸಚಿವ ಕೃಷ್ಣ ಭೈರೇಗೌಡ ಅವರು ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರಾದ ಕಾರಣ ವಿಐಪಿ ಪಾಸ್ ಗಳನ್ನು ರದ್ದುಗೊಳಿಸಿ ಸಾರ್ವಜನಿಕರ ದರ್ಶನಕ್ಕಾಗಿ ಹೆಚ್ಚು ಅವಕಾಶ ಮಾಡಿಕೊಟ್ಟಿದ್ದರು. ಯುಗಾದಿ ಅಚ್ಚುಕಟ್ಟಾಗಿ ದೇವಿಯ ದರ್ಶನ ವ್ಯವಸ್ಥೆ ನಡೆದಿದೆ ಎಂದು ಎಲ್ಲ ಭಕ್ತಾದಿಗಳು ಸಂತೋಷಪಡಿಸಿದ್ದಾರೆ.

Comments are closed.