TET Exam: ಕರ್ನಾಟಕದಲ್ಲಿ TET ಪರೀಕ್ಷೆಗೆ ಅರ್ಜಿ ಆಹ್ವಾನ, ಅಧಿಕೃತ ಸುತ್ತೋಲೆ ಪ್ರಕಟ

Share the Article

TET Exam: ಕರ್ನಾಟಕದಲ್ಲಿ TET ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಡಿ.7 ರಂದು ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಯಲಿದೆ. ಈ ಕುರಿತು ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ.

ಆರ್‌.ಟಿ.ಇ ಕಾಯ್ದೆಯ ಸೆಕ್ಷನ್‌ ಪ್ರಕಾರ, ರಾಷ್ಟ್ರೀಯ ಶಿಕ್ಷಣ ಶಿಕ್ಷಕರ ಪರಿಷತ್‌ (NCTE) 1 ರಿಂದ 8ನೇ ತರಗತಿಗಳ ಶಿಕ್ಷಕರಾಗಿ ನೇಮಕಾತಿಗೆ ಅರ್ಹರಾಗಲು ಕನಿಷ್ಠ ಅರ್ಹತೆಗಳನ್ನು ನಿಗದಿಪಡಿಸಿದೆ.

ಆರ್‌.ಟಿ.ಇ ಕಾಯ್ದೆ 2 ನೇ ವಿಭಾಗದಲ್ಲಿ ಷರತ್ತು (ಎನ್‌)ನಲ್ಲಿ ಉಲ್ಲೇಖ ಪಟ್ಟಂತೆ ಯಾವುದೇ ಶಾಲೆಗಳಲ್ಲಿ ಶಿಕ್ಷಕರಾಗಿ ನೇಮಕಾತಿಗೆ ಅರ್ಹತೆ ಪಡೆಯಲು NCTE ಯಿಂದ ರೂಪಿಸಲಾದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸೂಕ್ತ ಸರಕಾರದ ಮೂಲಕ ನಡೆಸಲಾಗುವ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (ಟಿ.ಇ.ಟಿ) ಉತ್ತೀರ್ಣರಾಗಿರಬೇಕು.

Comments are closed.