Crime: ಸಿನಿಮೀಯ ಶೈಲಿಯಲ್ಲಿ 20 ಕರುಗಳ ರಕ್ಷಣೆ ಮಾಡಿದ ಪೊಲೀಸರು

Share the Article

Illegal Cattle Transport: ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ಚೇಸ್‌ ಮಾಡಿ ಪೊಲೀಸರು 20 ಕರುಗಳನ್ನು ರಕ್ಷಣೆ ಮಾಡಿದ್ದಾರೆ.

ಬೊಲೆರೋ ವಾಹನದಲ್ಲಿ ಅಕ್ರಮ ಗೋವು ಸಾಗಾಟ ಮಾಡುತ್ತಿರುವ ಕುರಿತು ಜಯಪುರ ಪೊಲೀಸರು ಮಾಹಿತಿ ದೊರಕಿದ್ದು, ಕೂಡಲೇ ಪೊಲೀಸರು ಖದೀಮರ ಬೆನ್ನಟ್ಟಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಅತಿವೇಗವಾಗಿ ವಾಹನವನ್ನು ಚಲಾಯಿಸಿದ್ದಾರೆ. ಪೊಲೀಸರು ಕೂಡಾ ಖದೀಮರ ಬೊಲೆರೋ ವಾಹನವನ್ನು ಸಿನಿಮೀಯಶೈಲಿಯಲ್ಲಿ ಚೇಸ್‌ ಮಾಡಿದ್ದು, ಈ ವೇಳೆ ಆರೋಪಿಗಳು ಅತಿವೇಗದಲ್ಲಿ ಹುಲ್ಲಹಳ್ಳಿ ರಸ್ತೆ ಕಡೆಗೆ ವಾಹನವನ್ನು ತಿರುಗಿಸಿದ್ದಾರೆ.

ಖದೀಮರು ಅಹಲ್ಯಾ ಗ್ರಾಮದ ಬಳಿ ಜಾನುವಾರುಗಳನ್ನು ತುಂಬಿದ್ದ ವಾಹನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ವಾಹನದಲ್ಲಿದ್ದ ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ವಾಹನ ಪಲ್ಟಿಯಾದ ರಭಸಕ್ಕೆ ಕರುಗಳು ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಕೂಡಲೇ ಸ್ಥಳೀಯರ ಸಹಾಯದಿಂದ ಸುಮಾರು 20ಕ್ಕೂ ಹೆಚ್ಚು ಕರುಗಳನ್ನು ರಕ್ಷಣೆ ಮಾಡಿ ಪಿಂಜರಾಪೋಲ್‌ಗೆ ರವಾನೆ ಮಾಡಿದ್ದಾರೆ. ಬೊಲೆರೋ ವಾಹನವನ್ನು ಹುಲ್ಲಹಳ್ಳಿ ಪೊಲೀಸರು ವಶಪಡೆದು, ಪ್ರಕರಣ ದಾಖಲು ಮಾಡಿ ತನಿಖೆ ಆರಂಭ ಮಾಡಿದ್ದಾರೆ. ಈ ಘಟನೆ ಸಂಬಂಧ ಹುಲ್ಲಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.