Mangaluru: ಉಳ್ಳಾಲದಲ್ಲಿ ತಂದೆಯಿಂದಲೇ ಅಪ್ರಾಪ್ತೆಯ ಮೇಲೆ ಅತ್ಯಾ*ಚಾರ: ಕಿರುಚಾಡದಂತೆ ಬಾಯಿಗೆ ತಲೆದಿಂಬು ಇಟ್ಟು ಕೃತ್ಯ

Mangaluru: ದಕ್ಷಿಣ ಕನ್ನಡ ಉಳ್ಳಾಲದ ಕುಂಪಲ ಪ್ರದೇಶದಲ್ಲಿ ತಂದೆಯೇ ತನ್ನ ಮಗಳ ಮೇಲೆ ಕಳೆದ 10 ವರ್ಷಗಳಿಂದ ಅತ್ಯಾಚಾರ ಎಸಗುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಮಲತಂದೆ ಅಮೀರ್ (40) ಎಂಬಾತನನ್ನು ಉಳ್ಳಾಲ ಪೊಲೀಸರು ಬಂಧನ ಮಾಡಿದ್ದಾರೆ.

ಮಂಗಳೂರಿನ ಉಳ್ಳಾಲದ ಕುಂಪದಲ್ಲಿರುವ ಬಾಡಿಗೆ ಮನೆಯಲ್ಲಿ ಈ ಘಟನೆ ನಡೆದಿದೆ. ಬಾಲಕಿ ಅಪ್ರಾಪ್ತೆಯಾಗಿದ್ದಾಗಿನಿಂದಲೇ ಆರೋಪಿ ಮಲತಂದೆ ಅವಳ ಮೇಲೆ ಅತ್ಯಾ*ಚಾರ ಎಸಗುತ್ತಿದ್ದ ಎಂದು ವರದಿಯಾಗಿದೆ.
ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಅಮೀರ್ ಆಕೆ ಕಿರುಚದಂತೆ ಬಾಯಿಗೆ ತಲೆದಿಂಬು ಇಟ್ಟು ಕಿರುಚಾಡದಂತೆ ತಡೆಯುತ್ತಿದ್ದ. ಕಿರುಕುಳ ದಿನದಿಂದ ಹೆಚ್ಚಾಗುತ್ತಿದ್ದಂತೆ, ಬಾಲಕಿ ಅಜ್ಜಿಯ ಮನೆಯಲ್ಲಿ ವಾಸಿಸಲು ಶಾಲೆಗೆ ಹೋಗಲು ತೀರ್ಮಾನ ಮಾಡಿದಳು. ತಾಯಿಯ ಯೋಗ ಕ್ಷೇಮ ವಿಚಾರಿಸಲೆಂದು ಮನೆಗೆ ಬಂದಾಗ ಈತ ಮತ್ತೆ ಅತ್ಯಾ*ಚಾರ ಎಸಗುತ್ತಿದ್ದ ಎಂದು ಆರೋಪ ಮಾಡಲಾಗಿದೆ.
ಅ.18 ರಂದು ಶನಿವಾರ ಮಾನಸಿಕವಾಗಿ ಕುಗ್ಗಿದ್ದ ಅಪ್ರಾಪ್ತೆಯ ಸ್ಥಿತಿ ಚಿಂತಾಜನಕವಾಗಿದ್ದರಿಂದ ಕುಟುಂಬದವರು ಆಕೆಯನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರು. ಚಿಕಿತ್ಸೆಯ ಭಾಗವಾಗಿ ಕೌನ್ಸಲಿಂಗ್ ವೇಳೆ, ಬಾಲಕಿ ತಂದೆಯಿಂದ ನಡೆದ ಅತ್ಯಾ*ಚಾರದ ಸಂಪೂರ್ಣ ಮಾಹಿತಿ ಹೇಳಿದ್ದಾಳೆ.
ಕೌನ್ಸಲಿಂಗ್ ಹಾಗೂ ವೈದ್ಯಕೀಯ ದಾಖಲೆಗಳ ಆಧಾರದ ಮೇಲೆ, ಉಳ್ಳಾಲ ಪೊಲೀಸರು ಆರೋಪಿ ಅಮೀರ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ ಬಂಧನ ಮಾಡಿದ್ದಾರೆ.
Comments are closed.