Kolara : RSS ಪಥಸಂಚಲನದ ವೇಳೆ ಅಲ್ಲಾಹು ಅಕ್ಬರ್ ಘೋಷಣೆ !! ಮುಂದಾಗಿದ್ದೇನು ಗೊತ್ತಾ?

Share the Article

Kolara: RSS ಗೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ ಆರ್ ಎಸ್ ಎಸ್ ಪಥಸಂಚಲನ ನಡೆಯುತ್ತಿದೆ. ಅದರಂತೆ ಇಂದು (ಅಕ್ಟೋಬರ್ 18) ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲೂ ಆರ್.ಎಸ್.ಎಸ್ ಪಂಥಸಂಚಲನ ನಡೆದಿದ್ದು, ಈ ವೇಳೆ ಲ್ಲಾಹು ಅಕ್ಬರ್ ಘೋಷಣೆ ಕೂಗಾಲಾಗಿದೆ.

ಹೌದು, ಇಂದು ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ಕೂಡ ಆರ್‌ಎಸ್‌ಎಸ್ ಪಥಸಂಚಲನ ಆಯೋಜನೆ ಮಾಡಲಾಗಿತ್ತು. ಆದರೆ ಹೀಗೆ ಆರ್‌ಎಸ್‌ಎಸ್ ಸ್ವಯಂ ಸೇವಕರು ಪಂಥಸಂಚಲನದಲ್ಲಿ ಭಾಗಿಯಾಗಿದ್ದ ಸಮಯದಲ್ಲೇ ಅಲ್ಲಾಹು ಅಕ್ಬರ್… ಮೊಳಗಿದೆ.

ಅಂದಹಾಗೆ ಶ್ರೀನಿವಾಸಪುರದ ಬಾಲಕಿಯರ ಕಾಲೇಜಿನಿಂದ ಆರಂಭವಾದ ಪಥಸಂಚಲನ ಟಿಪ್ಪು ಸರ್ಕಲ್ ಸಮೀಪ ಬಂದಿತ್ತು. ಆದರೆ ಹೀಗೆ ಬಂದ ಸಮಯದಲ್ಲಿ ದಿಢೀರ್ ಕೆಲವು ಅನ್ಯ ಕೋಮಿನವರು ಅಲ್ಲಾಹು ಅಕ್ಬರ್ ಎಂದು ಪ್ರತಿ ಘೋಷಣೆ‌ ಕೂಗಿದ್ದಾರೆ. ಮತ್ತೊಂದೆಡೆ ಆಝಾನ್ ಕೂಗುವ ಸಮಯದಲ್ಲೆ ಪಥಸಂಚಲನ ಬಂದಿದೆ ಎಂದು ಆಕ್ರೋಶ ಕೂಡ ಹೊರ ಹಾಕಿದ್ದಾರೆ.

ಹೀಗಾಗಿ ಸ್ಥಳದಲ್ಲಿ ಕೆಲಕಾಲ ಪರಿಸ್ಥಿತಿ ಕೈಮೀರಿ ಹೋಗುವ ಮುನ್ಸೂಚನೆ ಸಿಕ್ಕಿತ್ತು. ಈ ವೇಳೆ ಜನರ ಗುಂಪನ್ನು ತಡೆದ ಪೊಲೀಸರು, ಸಂಭವಿಸಬಹುದಾಗಿದ್ದ ಗುಂಪುಘರ್ಷಣೆ ಗದ್ದಲ ತಡೆದರು. ಪಥ ಸಂಚಲನದ ಮಾಹಿತಿ ಇಲ್ಲವೆಂದು ಆಕ್ಷೇಪಿಸಿದ ಗುಂಪು, ಆಝಾನ್ ಕೂಗುವ ವೇಳೆಯಲ್ಲಿ ಪಥಸಂಚಲನಕ್ಕೆ ಬಂದಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿತು. ಆನಂತರ ಶಾಂತಿಯುತವಾಗಿ ಪಥಸಂಚಲನ ಮುಕ್ತಾಯವಾಯಿತು.

Comments are closed.