Caste Survey : ಅ. 31 ರವರೆಗೆ ಜಾತಿಗಣತಿ ವಿಸ್ತರಿಸಿ ಸರ್ಕಾರ ಆದೇಶ – ಮತ್ತೆ ಮುಂದೆ ಹೋಗುತ್ತಾ ಶಾಲೆ ಓಪನ್?

Share the Article

Caste Survey : ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ನಡೆಸಲಾಗುತ್ತಿರುವ ಜಾತಿ ಸಮೀಕ್ಷೆಯನ್ನು ಮತ್ತೆ ಅಕ್ಟೋಬರ್ 31ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ. ಈ ಬೆನ್ನಲ್ಲೇ ದಸರಾ ರಜೆ ಮತ್ತೆ ವಿಸ್ತರಣೆ ಯಾಗುತ್ತಾ ಎಂಬ ವಿಚಾರ ಕೂಡ ಚರ್ಚಿತವಾಗಿದೆ. ಆದರೆ ಸರ್ಕಾರ ಇದಕ್ಕೆ ಬದಲಿ ಮಾರ್ಗವನ್ನು ಕಂಡುಕೊಂಡಿದೆ

 

ಹೌದು, 2025ರವರೆಗೆ ರಾಜ್ಯಾಧ್ಯಂತ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯನ್ನು ವಿಸ್ತರಣೆ ಮಾಡಲಾಗಿದೆ. ಆದರೆ ಮುಂದಿನ ಜಾತಿ ಸಮೀಕ್ಷೆಗೆ ಶಿಕ್ಷಕರನ್ನು ಬಳಸಿಕೊಳ್ಳದಿರಲು ಸರ್ಕಾರವು ತೀರ್ಮಾನಿಸಿದೆ. ಮುಂದಿನ ಸಮೀಕ್ಷೆಯನ್ನು ಇಲಾಖೆಯ ಸಿಬ್ಬಂದಿಗಳನ್ನು ಬಳಸಿಕೊಂಡು ಜಾತಿಗಣತಿ ಸಮೀಕ್ಷೆ ಮುಂದುವರೆಸಲು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಂತ ಸಭೆಯಲ್ಲಿ ನಿರ್ಧರಿಸಲಾಗಿದೆ. ಶಾಲೆಗಳು ಆರಂಭವಾಗುವ ಹಿನ್ನೆಲೆಯಲ್ಲಿ ಈ ಒಂದು ಬದಲಿ ವ್ಯವಸ್ಥೆಯನ್ನು ಸರ್ಕಾರ ಮಾಡಿಕೊಂಡಿದೆ. ಹೀಗಾಗಿ ಸರ್ಕಾರ ತಿಳಿಸಿದಂತೆ ಸರಿಯಾದ ಸಮಯಕ್ಕೆ ದಸರಾ ರಜೆ ಮುಕ್ತಾಯಗೊಂಡು ಶಾಲೆಗಳು ಆರಂಭವಾಗಲಿದೆ.

 

ಇನ್ನೂ ಬೆಂಗಳೂರನ್ನು ಹೊರತುಪಡಿಸಿ ಇಲ್ಲಿಯವರೆಗೆ ಬಹುತೇಕ ಜಿಲ್ಲೆಗಳಲ್ಲಿ ಶೇ.95ರಷ್ಟು ಸಮೀಕ್ಷೆ ಕಾರ್ಯ ಮುಗಿದಿದೆ. ರಾಮನಗರ, ಬೀದರ್, ಧಾರವಾಡದಲ್ಲಿ ಇದರ ಪ್ರಮಾಣ ಶೇ. 90ಕ್ಕಿಂತ ಕಡಿಮೆ ಆಗಿದೆ. ಬೆಂಗಳೂರಲ್ಲಿ ಗಣತಿ ಕಾರ್ಯ ಅತ್ಯಂತ ನಿಧಾನವಾಗಿ ನಡೆಯುತ್ತಿದ್ದು ಈವರೆಗೆ ಕೇವಲ ಶೇ.45ರಷ್ಟು ಮನೆಗಳ ಸಮೀಕ್ಷೆ ಮಾತ್ರ ಮುಗಿದಿದೆ. ಈ ನಡುವೆ ದೀಪಾವಳಿ ಹಬ್ಬದ ರಜೆಯೂ ಬಂದಿರುವುದರಿಂದ ಸಮೀಕ್ಷೆ ವಿಸ್ತರಣೆಯ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಕ್ಟೋಬರ್​ 31ರ ಒಳಗೆ ಕಡ್ಡಾಯವಾಗಿ ಸಮೀಕ್ಷೆ ಮುಗಿಯಬೇಕು ಎಂಬ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸಿಎಂ ಸೂಚನೆ ಕೊಟ್ಟಿದ್ದಾರೆ.

Comments are closed.