RSS ಸಂಬಂಧಿತ ಜಮೀನುಗಳಿಗೆ ಕಡಿವಾಣ ಹಾಕಲು ಸರ್ಕಾರ ಮಾಸ್ಟರ್ ಪ್ಲಾನ್ !!


RSS: ರಾಜ್ಯದಲ್ಲಿ ಆರ್ ಎಸ್ ಎಸ್ ಸಂಘಟನೆಯನ್ನು ಬ್ಯಾನ್ ಮಾಡಬೇಕೆಂಬ ವಿಚಾರ ಜೋರಾಗಿ ಸದ್ದು ಮಾಡುತ್ತಿದೆ. ಈಗಾಗಲೇ ಸರ್ಕಾರಿ ಜಾಗಗಳಲ್ಲಿ ಆರ್ ಎಸ್ ಎಸ್ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ ಎಂದು ಸರ್ಕಾರ ವಿಧೇಯಕ ಮಂಡಿಸಲು ಚಿಂತನೆಯನ್ನು ಕೂಡ ನಡೆಸಿದೆ. ಇದರ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರವು ಆರ್ ಎಸ್ ಎಸ್ ಸಂಬಂಧಿಸಿದ ಜಮೀನುಗಳಿಗೆ ಕಡಿವಾಣ ಹಾಕಲು ಮಾಸ್ಟರ್ ಪ್ಲಾನ್ ಒಂದನ್ನು ಹೆಣೆದಿದೆ.
ಹೌದು, RSS ಬಗ್ಗೆ ಮತ್ತೊಂದು ಪ್ಲಾನ್ ಮಾಡಿಕೊಂಡಿರುವ ರಾಜ್ಯ ಸರ್ಕಾರ ಆರ್ ಎಸ್ ಎಸ್ ಸಂಬಂಧಿತ ಸಂಸ್ಥೆಗಳ ಜಮೀನುಗಳಿಗೆ ಅಂಕುಶ ಹಾಕುವ ಚಿಂತನೆ ನಡೆಸುತ್ತಿದೆ. ಸಚಿವ ಪ್ರಿಯಾಂಕ ಖರ್ಗೆಗೆ ಕಾಂಗ್ರೆಸ್ ನಾಯಕರು ಈ ಕುರಿತು ಸಲಹೆ ನೀಡಿದ್ದು, ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಿದ್ದ ಭೂಮಿಯನ್ನು ಪರಿಶೀಲನೆ ಮಾಡುವಂತೆ ಸೂಚಿಸಿದ್ದಾರೆ.
2023ರಲ್ಲೂ ಸರ್ಕಾರ ಬಂದ ಆರಂಭದಲ್ಲೇ ಈ ಕುರಿತು ಪರಿಶೀಲನೆ ನಡೆದಿತ್ತು. ಬಳಿಕ ಆರ್ ಎಸ್ ಎಸ್ ಲ್ಯಾಂಡ್ ಆಡಿಟ್ ಸ್ಥಗಿತಗೊಂಡಿತ್ತು. ಹಂಚಿಕೆಯಾದ ವಿವಾಹಿತ ಭೂಮಿಗಳ ಶಾರ್ಟ್ ಲೀಸ್ಟ್ ಅಲ್ಲಿ ಪರಿಶೀಲನೆ ಕುರಿತು ಚಿಂತನೆ ನಡೆಸಲಾಗುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರ್ ಎಸ್ ಎಸ್ ಕೆ ಹಂಚಿದ್ದ ಜಮೀನು ಇದಾಗಿದ್ದು, ಹಂಚಿಕ ಮಂಡಿಸಿದ ಭೂಮಿಯನ್ನು ಸರ್ಕಾರ ಪರಿಶೀಲನೆ ಮಾಡಲಿದೆ.
Comments are closed.